ರಾಯಚೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಅಲ್ಲಲ್ಲಿ ಅವಾಂತರಗಳನ್ನ ಸೃಷ್ಟಿಸಿದೆ. ಮಸ್ಕಿ ತಾಲೂಕಿನ ಗೋನವಾರ ಗ್ರಾಮದಲ್ಲಿ ಕೆರೆ ಕೊಡಿ ಒಡೆದು ರೈತರ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ನಾಟಿ ಮಾಡಿದ್ದ ಭತ್ತದ ಬೆಳೆ ನೀರುಪಾಲಾಗಿದೆ.
Advertisement
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಗೋನವಾರ ಕೆರೆ ಭರ್ತಿಯಾಗಿತ್ತು. ಕೆರೆಗೆ ಹೆಚ್ಚು ಪ್ರಮಾಣದ ನೀರು ಹರಿದು ಬಂದಿದ್ದರಿಂದ ಕೆರೆಯ ಒಂದು ಭಾಗ ಒಡೆದಿದೆ. ಗ್ರಾಮಕ್ಕೆ ನೀರು ನುಗ್ಗುವ ಆತಂಕದಿಂದ ಕೆರೆಯ ಕೊಡಿಯ ಗಿಡಗಂಟೆಗಳನ್ನ ತೆರವು ಮಾಡಿ ನೀರು ಹೊರಬಿಡಲಾಗಿದೆ. ಗ್ರಾಮಕ್ಕೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರು ಕೆರೆಯ ಒಂದು ಭಾಗದಲ್ಲಿ ಹರಿವು ಮಾಡಿ ನೀರು ಬಿಟ್ಟಿದ್ದರಿಂದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.
Advertisement
ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತhttps://t.co/g20QyXv15S#Chikkamagaluru #Rain #KannadaNews #Bidar #KarnatakaRains
— PublicTV (@publictvnews) July 10, 2021
Advertisement
ನಾಟಿ ಮಾಡಿದ್ದ ಭತ್ತ ಹಾಗೂ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ತೊಗರಿ ಬೆಳೆಗಳೆಲ್ಲಾ ನೀರು ಪಾಲಾಗಿರುವುದರಿಂದ ಸರ್ವೆ ಮಾಡಿ ಪರಿಹಾರ ನೀಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Advertisement
ಕೋಲಾರದಲ್ಲಿ ಭಾರೀ ಮಳೆ- ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು https://t.co/n2uKLDN5Jo#Rain #Kolar #Karnataka #KannadaNews
— PublicTV (@publictvnews) July 9, 2021