ರಾಯಚೂರು: ಕೊರೊನಾ ಸೋಂಕಿನಿಂದ ಗುಣಮುಖವಾಗಿ ಜಿಲ್ಲೆಯ ಕೊವಿಡ್-19 ಆಸ್ಪತ್ರೆಯಿಂದ ಇಂದು 34 ಜನರನ್ನ ಡಿಸ್ಚಾರ್ಜ್ ಮಾಡಲಾಗಿದೆ. ಮೇ 17, 18 ಹಾಗೂ 19 ರಂದು ಆಸ್ಪತ್ರೆಗೆ ದಾಖಲಾಗಿದ್ದವರನ್ನ ಬಿಡುಗಡೆ ಮಾಡಲಾಗಿದೆ.
ಐಸೋಲೇಷನ್‍ನಲ್ಲಿದ್ದವರನ್ನ ಮತ್ತೊಮ್ಮೆ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿದೆ. ಹೀಗಾಗಿ 34 ಜನರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಬಿಡುಗಡೆಯಾದವರು 14 ದಿನ ಹೋಂ ಕ್ವಾರಂಟೈನ್ ಇರಬೇಕು. ಬಿಡುಗಡೆಯಾದವರಲ್ಲಿ ರಾಯಚೂರು ಹಾಗೂ ದೇವದುರ್ಗ ತಾಲೂಕಿನವರಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ತಿಳಿಸಿದರು.
Advertisement
Advertisement
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಪುಷ್ಪವೃಷ್ಠಿ ಮಾಡಿದರು.
Advertisement
ಕೊರೊನಾ ಸೋಂಕಿನ ಮೂಲವೇ ತಿಳಿಯದೆ ತಲೆನೋವಾಗಿದ್ದ ರಾಯಚೂರು ತಾಲೂಕು ಮಲಿಯಾಬಾದ್‍ನ ಎರಡು ವರ್ಷದ ಬಾಲಕಿ ಸಹ ಇಂದು ಬಿಡುಗಡೆಯಾಗಿದ್ದಾಳೆ. ಬಾಲಕಿಗೆ ಈಗ ನೆಗೆಟಿವ್ ಬಂದಿದೆ. ಆದರೆ ಮಲಿಯಾಬಾದ್ ಗ್ರಾಮ ಕಂಟೈನ್ಮೆಂಟ್ ಝೋನ್ ಆಗಿ ಮುಂದುವರಿಯಲಿದೆ ಅಂತ ವೆಂಕಟೇಶ್ ಕುಮಾರ್ ತಿಳಿಸಿದರು.