ರಾಯಚೂರು: ತಾಪಮಾನ ಹೆಚ್ಚಳ, ಆಮ್ಲಜನಕ ಕೊರತೆಯಿಂದ ರಾಯಚೂರು ನಗರದ ಮಾವಿನಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಕೆರೆಗೆ ನಗರದ ಚರಂಡಿ ನೀರು, ಕಸ ಸೇರುತ್ತಿರುವ ಹಿನ್ನೆಲೆ ಕೆರೆಯ ನೀರಿನ ಗುಣಮಟ್ಟ ಹಾಳಾಗಿದೆ. ಕೆರೆಯಲ್ಲಿ ಸ್ವಚ್ಛತೆ ಇಲ್ಲದೆ ಮೀನುಗಳ ಮಾರಾಣಹೋಮ ನಡೆದಿದೆ. ತಾಪಮಾನ ಹೆಚ್ಚಳದಿಂದ ಆಮ್ಲಜನಕ ಕೊರತೆಯೂ ಉಂಟಾಗಿ ಮೀನುಗಳು ಸಾವನ್ನಪ್ಪಿದ್ದು, ಕೆರೆಯ ತುಂಬಾ ಸತ್ತ ಮೀನುಗಳು ತೇಲಾಡುತ್ತಿವೆ.
Advertisement
ಪ್ರತಿ ವರ್ಷ ಇದೇ ರೀತಿ ಮೀನುಗಳು ಸಾವನ್ನಪ್ಪುತ್ತಿದ್ದು, ಬಿಸಿಲಿನ ತಾಪಕ್ಕೆ ಕೆರೆಯಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಮೀನುಗಳ ಸಾವಿನಿಂದಾಗಿ ನಗರದಲ್ಲಿ ದುರ್ವಾಸನೆ ಹರಡುತ್ತಿದೆ. ಇಂದಿರಾನಗರ ಹಾಗೂ ಆಜಾದ್ ನಗರ ನಿವಾಸಿಗಳಿಗೆ ಸತ್ತ ಮೀನಿನ ದುರ್ವಾಸಣೆ ಯಿಂದ ರೋಗಗಳು ಹರಡುವ ಭೀತಿ ಮೂಡಿದೆ. ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಇಂತಹ ಸ್ಥಿತಿ ಮರುಕಳಿಸುತ್ತಿದ್ದರೂ ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ಪರಿಣಾಮ ಕೆರೆ ಸುತ್ತಮುತ್ತಲ ಬಡಾವಣೆಗಳ ಜನ ನರಕಯಾತನೆ ಅನುಭವಿಸುತ್ತಿದ್ದಾರೆ.