– ಗರ್ಭಿಣಿಗೆ ತೀವ್ರ ರಕ್ತಸ್ರಾವವಾದರೂ ಬಾರದ ವೈದ್ಯರು
ರಾಯಚೂರು: ಜಿಲ್ಲೆಯ ಕೋವಿಡ್-19 ಆಸ್ಪತ್ರೆ ಓಪೆಕ್ ಕೊರೊನಾ ಸೋಂಕಿತರ ಪಾಲಿಗೆ ನರಕವಾಗಿದೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿನ ಸೋಂಕಿತರು ಊಟ ಬಿಟ್ಟು ಪ್ರತಿಭಟನೆ ಮಾಡಿದ್ದಾರೆ.
ಕೊವಿಡ್ ಐಸೋಲೆಷನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿನ ಗರ್ಭಿಣಿಯೊಬ್ಬರಿಗೆ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ಬರುತ್ತಿಲ್ಲ ಎಂದು ವೈದ್ಯರ ವಿರುದ್ಧ ಕಿಡಿ ಕಾರಿದ್ದಾರೆ. ಓಪೆಕ್ ಆಸ್ಪತ್ರೆಯಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಈ ಮೂಲಕ ಅಲ್ಲಿನ ಪರಸ್ಥಿತಿಯನ್ನು ತಿಳಿಸಿದ್ದಾರೆ.
Advertisement
Advertisement
ಭಾನುವಾರದಿಂದ ಗರ್ಭಿಣಿ ನೋವು ಅನುಭವಿಸುತ್ತಿದ್ದರೂ ಯಾವ ವೈದ್ಯರು ವಾರ್ಡ್‍ಗೆ ಬಂದಿಲ್ಲ. ಗರ್ಭಿಣಿಯ ಪರಿಸ್ಥಿತಿ ಇಂದು ಗಂಭೀರವಾಗಿದ್ದರಿಂದ ಸೋಂಕಿತರೆಲ್ಲ ಸೇರಿ ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೆಲವರು ಬಂದು 20 ದಿನವಾದರೂ ಮರು ಪರೀಕ್ಷೆ ಮಾಡಿಲ್ಲ, ಇನ್ನೂ ಕೆಲವರ ವರದಿ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಿಂದ ಎಚ್ಚೆತ್ತ ವೈದ್ಯರು ಗರ್ಭಿಣಿಯನ್ನು ಓಪೆಕ್ ನಿಂದ ರಿಮ್ಸ್‍ಗೆ ರವಾನಿಸಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.