ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಕಿರಣ ಸಂಸ್ಥೆ, ಸೂರ್ಯ ಕಿರಣ ಸಂಸ್ಥೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಜೊತೆಗೆ ಸೂರ್ಯಗ್ರಹಣ ವೇಳೆ ಮೂಢನಂಬಿಕೆ ಹಾಗೂ ಮೂಢ ಆಚರಣೆಗಳ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕರಿಗೆ ಬಿಸ್ಕೆಟ್ ನೀಡಲಾಗಿದೆ. ಗ್ರಹಣ ಕುರಿತ ವೈಜ್ಞಾನಿಕ ವಿಚಾರಗಳ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ನೀಡುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
Advertisement
Advertisement
ಗ್ರಹಣದ ಕ್ಷಣ ಕ್ಷಣದ ದೃಶ್ಯಗಳನ್ನು ನೋಡಿ ಸಾರ್ವಜನಿಕರು ಆನಂದಿಸುತ್ತಿದ್ದಾರೆ. ನಗರದಲ್ಲಿ ಮೋಡಕವಿದ ವಾತಾವರಣವಿದ್ದರೂ ಗ್ರಹಣ ವೀಕ್ಷಣೆಗೆ ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲಿ ಗ್ರಹಣ ಭಾಗಶಃ ಗೋಚರವಾಗುತ್ತಿದ್ದು, ಸಾರ್ವಜನಿಕರು ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ.