ರಾಯಚೂರು: ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಜೋರಾಗಿದೆ. ಕಳೆದೆರಡು ವರ್ಷಕ್ಕಿಂತಲೂ ಹೆಚ್ಚು ಸಂಭ್ರಮದಿಂದ ಜೋಡಿ ಮಣ್ಣೆತ್ತುಗಳನ್ನು ಖರೀದಿಸಿ ಜನರು ಪೂಜಿಸುತ್ತಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮಣ್ಣೆತ್ತಿನ ಹಬ್ಬ ಬಹಳ ವಿಶೇಷವಾಗಿದ್ದು, ಮುಂಗಾರು ಮಳೆ ಉತ್ತಮವಾಗಿ ಬರಲಿ ಅಂತ ರೈತರು ಮಾತ್ರವಲ್ಲದೆ ಎಲ್ಲರೂ ಪ್ರಾರ್ಥಿಸುತ್ತಾರೆ. ಲಾಕ್ ಡೌನ್ ಬಳಿಕ ಬಂದಿರುವ ಹಬ್ಬದ ಸಂಭ್ರಮ ಜೋರಾಗಿರುವುದರಿಂದ ಮಣ್ಣೆತ್ತಿಗೆ ಈ ವರ್ಷ ಬೇಡಿಕೆ ಜಾಸ್ತಿಯಾಗಿದೆ. ಆದರೆ ಮಣ್ಣೆತ್ತು ಮಾಡುವವರ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಅಲ್ಲದೆ ಜನ ಮಣ್ಣೆತ್ತು ಖರೀದಿಗೆ ಬರುತ್ತಾರೋ ಇಲ್ಲವೋ ಅಂತ ಕುಂಬಾರರು ಕಡಿಮೆ ಎತ್ತುಗಳನ್ನ ಮಾಡಿದ್ದಾರೆ. ತಂಡೋಪತಂಡವಾಗಿ ಬಂದು ಜನ ಮಣ್ಣೆತ್ತು ಖರೀದಿಸುತ್ತಿದ್ದಾರೆ. ಮನೆಯಲ್ಲೇ ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಚರಿಸುವ ಮಣ್ಣೆತ್ತಿನ ಹಬ್ಬವನ್ನು ನಗರದ ಜನರು ಸಹ ಸಂಭ್ರಮಿಸುತ್ತಿದ್ದಾರೆ. 80 ರಿಂದ 100 ರೂಪಾಯಿಗೆ ಒಂದು ಜೋಡಿ ಎತ್ತುಗಳ ಮಾರಾಟ ನಡೆದಿದೆ. ಕಳೆದ ವರ್ಷ 40 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅಲ್ಲದೆ ಬೇಡಿಕೆಗೆ ಅನುಗುಣವಾಗಿ ಈ ವರ್ಷ ಎತ್ತುಗಳನ್ನ ಗ್ರಾಹಕರ ಮುಂದೆಯೇ ಮಾಡಿಕೊಡಲಾಗುತ್ತಿದೆ. ಇದನ್ನೂ ಓದಿ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?