ರಾಯಚೂರು: ನಗರದಲ್ಲಿ ಇಂದು ಜಿಲ್ಲಾಡಳಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿತು. ಆದ್ರೆ ನೂರಾರು ಸಂಖ್ಯೆಯಲ್ಲಿ ಬಂದ ಕಾರ್ಮಿಕರು ಸಾಮಾಜಿಕ ಅಂತರ, ಮಾಸ್ಕ್ ಮರೆತು ಮುಗಿಬಿದ್ದು ಆಹಾರ ಕಿಟ್‍ಗಳನ್ನ ಪಡೆದರು. ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಇರಿಸಲಾಗಿದ್ದ, ಆಹಾರ ಕಿಟ್‍ಗಳನ್ನ ವಿತರಿಸಲಾಯಿತು.
Advertisement
ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚನೆ ನೀಡಿದ್ರೂ ಕೇರ್ ಮಾಡದೇ ಕಾರ್ಮಿಕರು ನೂಕುನುಗ್ಗಲು ಮಾಡಿದರು. ಪೊಲೀಸರ ಸೂಚನೆಗೂ ಕಿಮ್ಮತ್ತುಕೊಂಡದೇ ನೂರಾರು ಜನ ಆಹಾರ ಧಾನ್ಯ ಕಿಟ್ ಗಾಗಿ ವಾಗ್ವಾದ ನಡೆಸಿದರು. ಕ್ಯೂ ನಿಂತ ಸ್ಥಳದಲ್ಲೇ ಮಹಿಳಾ ಕಾರ್ಮಿಕರು ಸಹ ವಾಗ್ವಾದ ನಡೆಸಿದರು.
Advertisement
Advertisement
ಜಿಲ್ಲೆಯಾದ್ಯಂತ 45 ಸಾವಿರ ಕಾರ್ಮಿಕರು ನೋಂದಣಿಯಾಗಿದೆ. ರಾಯಚೂರು ತಾಲೂಕಿನಲ್ಲಿ 25 ಸಾವಿರ ಕಾರ್ಮಿಕರು ನೋಂದಣಿಯಾಗಿದ್ದಾರೆ. ಪ್ರತಿದಿನ ಕ್ಷೇತ್ರವಾರು 600 ರಿಂದ 800 ಜನರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಕಿಟ್ ವಿತರಿಸಲಾಗುತ್ತಿದೆ. ಆದ್ರೆ ಕೋವಿಡ್ ನಿಯಮಪಾಲನೆ ಮಾತ್ರ ಮಾಯವಾಗಿದೆ.
Advertisement