ದಾವಣಗೆರೆ: ಸದ್ಯ ದೇಶದಾದ್ಯಂತ ಶ್ರೀರಾಮ ಮಂದಿರ ನಿರ್ಮಾಣದ್ದೇ ಮಾತು. ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬ ಭಾರತೀಯನ ಕಾಣಿಕೆ ಇರಲಿ ಎಂದು ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.
ಅದೇ ರೀತಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇಲ್ಲಿ ಮುಸ್ಲಿಮರು ಕೂಡ ದೇಣಿಗೆ ನೀಡಿರುವುದು ವಿಶೇಷವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಹಿಂದೂ-ಮುಸ್ಲಿಮರ ಭಾವೈಕ್ಯತೆಯನ್ನು ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗ್ರಾಪಂ ಮಾಜಿ ಸದಸ್ಯ ಮುಸ್ತಫೀಜ್‍ಉಲ್ಲಾ ಹಾಗೂ ಜಾಮೀಯಾ ಮಸೀದಿಯ ಕಮಿಟಿಯಿಂದ ರಾಮ ಮಂದಿರ ನಿರ್ಮಾಣ ಮಾಡಲು ಹಣವನ್ನು ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಹಣವನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಮುಸ್ತಫೀಜ್‍ಉಲ್ಲಾ ಅವರು ಮುಸ್ಲಿಂ ಹಿರಿಯ ಮುಖಂಡ ಮಹಮದ್ ಶಬ್ಬೀರ್ ಪುತ್ರ. ಇವರು ಮೂಲತಃ ನ್ಯಾಮತಿ ತಾಲೂಕಿನವರಾಗಿದ್ದಾರೆ. ಅಲ್ಲದೆ ನಗರದ ಜಾಮೀಯ ಮಸೀದಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಮ ಮಂದಿರಕ್ಕೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ದೇಣಿಗೆ ನೀಡಿ ಭಾವೈಕ್ಯತೆ ಮೆರೆದಿದ್ದಾರೆ.