ಪಾಟ್ನಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಲೋಕಜನ ಶಕ್ತಿ ಪಕ್ಷ(ಎಲ್‌ಜಿಪಿ) ಸೀತಾ ಮಂದಿರ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದೆ.
ಬಿಹಾರ ಚುನಾವಣೆ ಮತ್ತು ದಸರಾ ಹಿನ್ನೆಲೆಯಲ್ಲಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೀತಾಮಹ್ರಿಗೆ ಇಂದು ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕಿಂತ ದೊಡ್ಡದಾದ ಸೀತಾ ದೇವಾಲಯವನ್ನು ಇಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
Advertisement
#WATCH Chirag Paswan is making a promise to you today – the corruption in '7 Nischay' (scheme) will be probed when LJP comes to power & those at fault, whether it is CM or any official, will be sent to jail: LJP chief Chirag Paswan at a campaign in Dumraon, Buxar#BiharElections pic.twitter.com/emtgyvtTdA
— ANI (@ANI) October 25, 2020
Advertisement
‘ಬಿಹಾರ ಫಸ್ಟ್, ಬಿಹಾರಿ ಫಸ್ಟ್ʼ ಹೆಸರಿನ ಪ್ರಣಾಳಿಕೆಯನ್ನು ಎಲ್‌ಜೆಪಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸೀತಾ ದೇವಾಲಯ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದೆ.
Advertisement
ಮುಂದೆ ಬಿಹಾರದಲ್ಲಿ ಎಲ್‌ಜೆಪಿ ಸರ್ಕಾರ ಬರಲಿದ್ದು ನಾವು ಶಂಕುಸ್ಥಾಪನೆ ನೆರವೇರಿಸುತ್ತೇವೆ. ಯಾರು ಈಗ ಮುಖ್ಯಮಂತ್ರಿ ಆಗಿದ್ದೃೋ ಅವರು ಮತ್ತೆ ಆಯ್ಕೆಯಾಗುವುದಿಲ್ಲ. ಬಿಜೆಪಿ ನಾಯಕತ್ವದ ಅಡಿಯಲ್ಲಿ ಬಿಜೆಪಿ- ಎಲ್‌ಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಇದೇ ಅಕ್ಟೋಬರ್ 28 ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.