– ನಮ್ಮ ಅಕ್ಕ ತಂಗಿಯರನ್ನು ಕಳೆದುಕೊಳ್ತೇವೆ
ಚಿಕ್ಕಮಗಳೂರು: ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ಪ್ರಪಂಚ ನೆಟ್ಟಗೆ ಆಗುತ್ತೆ ಅಂತ ನಮ್ಮ ಯುವ ಸಮೂಹ ತಿಳಿದಿದೆ. ಆದರೆ ಪ್ರಪಂಚ ನೆಟ್ಟಗೆ ಆಗುತ್ತೊ ಇಲ್ವೋ ರಾಜಕಾರಣಿಗಳು ನೆಟ್ಟಗಾಗುತ್ತಾರೆ ಎಂದು ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನದ ಬಳಿಕ ಮಾತನಾಡಿದ ಅವರು, ಹೀಗೆ ನಮ್ಮ ಅಕ್ಕತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ರಾಮರಾಜ್ಯ ಅಂತಾರೆ, ಮರ್ಯಾದೆ ಪುರುಷೋತ್ತಮ ರಾಮ ಅಂತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿದ್ದಕ್ಕೆ ಸಂಭ್ರಮಿಸ್ತಾರೆ. ರಾಮ ದೇವಾಲಯ ಬಿಡುಗಡೆಯಾಗಿದ್ದಕ್ಕೆ ಸಿಹಿ ಹಂಚುತ್ತಾರೆ. ಆದರೆ ಓರ್ವ ದಲಿತ ಹೆಣ್ಣು ಮಗಳನ್ನು ರಾತ್ರಿ ಆತ್ಯಾಚಾರ ಮಾಡಿ ಅವಳನ್ನು ಕೊಂದು ಶಿಕ್ಷೆಯನ್ನು ತಪ್ಪಿಸೋದಕ್ಕೆ ರಾತ್ರೋರಾತ್ರಿ ಗುಟ್ಟಾಗಿ ಕುಟುಂಬಕ್ಕೂ ಹೇಳದೇ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಈ ರೀತಿಯ ಕೆಲಸಕ್ಕೆ ಸರ್ಕಾರವೇ ಬೆಂಬಲವಾಗಿ ನಿಲ್ಲುತ್ತೆ ಅಂದ್ರೆ ಇಂತಹಾ ಸರ್ಕಾರವನ್ನ ಮನುಷ್ಯ ಸರ್ಕಾರ ಅನ್ನಬೇಕೋ ಅಥವ ಮೃಗಿಯ ಸರ್ಕಾರ ಅನ್ನಬೇಕೋ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.