ರಾಮುಲುಗೆ ವಯಸ್ಸಾಗಿಲ್ಲ, ರಾಜಕೀಯದಲ್ಲಿ ಬಹಳ ಅವಕಾಶಗಳಿವೆ: ಬೈರತಿ ಬಸವರಾಜ್

Public TV
1 Min Read
CTD 1 6

ಚಿತ್ರದುರ್ಗ: ಸಚಿವ ಶ್ರೀರಾಮುಲು ಅವರಿಗೇನು ವಯಸ್ಸಾಗಿಲ್ಲ ಯುವಕರಿದ್ದಾರೆ. ಅನೇಕ ವರ್ಷ ರಾಜಕೀಯದಲ್ಲಿ ಇರುತ್ತಾರೆ. ಅವರಿಗೆ ಅವಕಾಶಗಳು ಬಹಳಷ್ಟಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

B Sriramulu medium

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮಾತನಾಡಿದ ಸಚಿವರು, ಶ್ರೀರಾಮುಲು ಅವರಿಗೆ ಡಿಸಿಎಂ ಮುಂದೆ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಯಾವುದು ಶಾಶ್ವತವಲ್ಲ. ಯಾವಾಗ ಏನಾದರೂ ಆಗಬಹುದು. ಅಲ್ಲದೇ ನಾವೇನು ಮಂತ್ರಿ ಸ್ಥಾನಕ್ಕಾಗಿ ಬಿಜೆಪಿಗೆ ಬರಲಿಲ್ಲ. ಮನಸ್ಸಿಗೆ ನೋವಾಗಿ ಸ್ವಾಭಿಮಾನಕ್ಕೆ ಧಕ್ಕೆಯಾದ ಪರಿಣಾಮ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದೇವೆ ಎಂದರು.

CTD 2 1 medium

ನಾವು ಬಿಜೆಪಿ ಸೇರಿದ್ದು ಮಂತ್ರಿ ಮಾಡ್ತಾರೆ ಅಂತ ಅಲ್ಲ. ಸ್ವಾಭಿಮಾನದಿಂದ ಬಿಜೆಪಿ ಸೇರಿದ್ದೇವೆ. ಬಿಜೆಪಿ ಸಹ ಅವಕಾಶ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಕೆಲಸವನ್ನು ಒಗ್ಗಟ್ಟಿನಿಂದ ಮಾಡುತ್ತೇವೆ ಎಂದು ಶ್ರೀರಾಮುಲು ಎದುರಲ್ಲೇ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಅಲ್ಲದೆ ಈ ಮೂಲಕ ಡಿಸಿಎಂ ಸ್ಥಾನ ತಪ್ಪಿದ ಸಚಿವ ರಾಮುಲುಗೆ ಆತ್ಮಸ್ಥೈರ್ಯ ತುಂಬಿದರು. ಇದನ್ನೂ ಓದಿ: ಸಿಎಂ ಸ್ಥಾನ ಎಂಬ ವೈರಸ್‍ಗೆ ಕೈ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು: ಶ್ರೀರಾಮುಲು

Sriramulu Shivamogga medium

ಇದೇ ವೇಳೆ ನಾಯಕನಹಟ್ಟಿ ಪಟ್ಟಣ ಪಂಚಾಯ್ತಿಯ ಜಲಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ಕೋಟಿ ವೆಚ್ಚದ ಜಲಶುದ್ಧೀಕರಣ ಘಟಕ ನಾಯಕನಟ್ಟಿ ಪಟ್ಟಣದ ಜನರ ಬಹುದಿನಗಳ ಕನಸು ಇದಾಗಿತ್ತು. ಈ ನಿಟ್ಟಿನಲ್ಲಿ ಜನರಿಗೆ ಈ ಶುದ್ಧನೀರನ್ನು ಪೂರೈಸುವ ಸೇವೆ ಘಟಕ ನೀಡಲಿದೆ ಎಂದು ತಿಳಿಸಿದರು.

CTD 4 medium

Share This Article
Leave a Comment

Leave a Reply

Your email address will not be published. Required fields are marked *