ನವದೆಹಲಿ: ಪ್ರಸಿದ್ಧ ರಾಮಾಯಾಣ ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಅರುಣ್ ಗೋವಿಲ್ ಕಮಲ ಧ್ವಜ ಹಿಡಿದರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅರುಣ್ ಗೋವಿಲ್, ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ದೇಶ ಸೇವೆ ಸಲ್ಲಿಸಲು ಬಿಜೆಪಿ ಉತ್ತಮ ವೇದಿಕೆಯಾಗಿದೆ. ಜೈ ಶ್ರೀರಾಮ ಘೋಷಣೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅಲರ್ಜಿ ಇರೋದನ್ನ ನಾನು ಗಮನಿಸಿದ್ದೇನೆ. ಜೈಶ್ರೀರಾಮ ಕೇವಲ ಘೋಷಣೆಯಲ್ಲ ಅದೊಂದು ಶಕ್ತಿ ಎಂದು ದೀದಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಸದ್ಯ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಅರುಣ್ ಗೋವಿಲ್ ಅವರನ್ನ ಬಿಜೆಪಿ ಪ್ರಚಾರದ ಅಖಾಡಕ್ಕೆ ಇಳಿಸಲಿದೆ ಎಂದು ಹೇಳಲಾಗುತ್ತಿದೆ. ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ದೇಶಾದ್ಯಂತ ಚಿರಪರಿಚಿತರು. ಲಾಕ್‍ಡೌನ್ ವೇಳೆ ಸರ್ಕಾರ ರಾಮಾಯಾಣ ಧಾರಾವಾಹಿಯನ್ನ ಪುನರ್ ಪ್ರಸಾರ ಮಾಡಿತ್ತು.
Advertisement
Actor Arun Govil joins BJP at party headquarters in New Delhi. #JoinBJP pic.twitter.com/eiI1aCdRRt
— BJP (@BJP4India) March 18, 2021