ರಾಯಚೂರು: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
Advertisement
ರಾಯರ 349 ನೇ ರಾಯರ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಸಂಭ್ರಮದ ಮಧ್ಯೆಯೇ ರಾಮಮಂದಿರ ನಿರ್ಮಾಣದ ಶುಭ ಸಂದರ್ಭ ಹಿನ್ನೆಲೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ದೀಪೋತ್ಸವ ಹಾಗೂ ಸುವರ್ಣ ರಾಮದೇವರಿಗೆ ಪೂಜೆ ಮಾಡಿದರು. ರಾಯರ ಆರಾಧನೆ ವೇಳೆಯಲ್ಲೇ ನಡೆಯುತ್ತಿರುವ ರಾಮಮಂದಿರ ಶೀಲಾನ್ಯಾಸ ಶುಭಕಾರ್ಯವಾಗಿರುವುದರಿಂದ ಸ್ವತಃ ಸುಬುಧೇಂದ್ರತೀರ್ಥ ಸ್ವಾಮಿ ವಿಶೇಷ ಪೂಜೆ ನೆರವೇರಿಸಿದರು.
Advertisement
Advertisement
ಇನ್ನೂ ಸಪ್ತರಾತ್ರೋತ್ಸವ ಅಂಗವಾಗಿ ಮಂತ್ರಾಲಯದಲ್ಲಿ ಇಂದು ಮಧ್ಯಾರಾಧನೆ ಸಂಭ್ರಮ ಮನೆ ಮಾಡಿತ್ತು. ಪ್ರಹ್ಲಾರಾಯರ ಪಾದ ಪೂಜೆ, ಮೂಲ ಬೃಂದಾವನ ಪೂಜೆ ,ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ತಿರುಮಲ ತಿರುಪತಿ ದೇವಾಲಯದಿಂದ ಬಂದ ಪವಿತ್ರ ಶೇಷವಸ್ತ್ರವನ್ನ ರಾಯರಿಗೆ ಅರ್ಪಣೆ ಮಾಡಲಾಯಿತು. ಮಠದ ಪ್ರಾಂಗಣದಲ್ಲಿ ರಥೋತ್ಸವ ಜರುಗಿಸಲಾಯಿತು. ಆರಾಧನಾ ಹಿನ್ನೆಲೆ ಸಾಂಸ್ಕೃತಿಕ ,ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಇನ್ನೂ ನಾಳೆ ಉತ್ತರಾರಾಧನೆ ನಡೆಯಲಿದೆ.