ಚೆನ್ನೈ: ಶತಮಾನಗಳ ಕನಸು ನನಸಾಗುವ ಸಂದರ್ಭದಲ್ಲಿ ಚಿಕಣಿ ಕಲಾವಿದರೊಬ್ಬರು ಚಿನ್ನವನ್ನು ಬಳಸಿ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ
ಇಂದು ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಹೀಗಾಗಿ ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ
Advertisement
Advertisement
ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಬಳಸಿ ಇಂದು ಇಂಚಿನ ರಾಮನ ಪ್ರತಿಮೆಯನ್ನು ತನ್ನ ಕೈಯಾರೆ ತಯಾರಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.
Advertisement
Tamil Nadu: Mariappan, miniature artist from Coimbatore has made a figurine of Ram using gold. He says, "Construction of Ram temple is historic. I've made a one-inch statuette of Lord Ram using 1.2-gram gold to mark this occasion & will send it to Ram temple trust." (04.08.2020) pic.twitter.com/eUOnbDmVDH
— ANI (@ANI) August 4, 2020
Advertisement
“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕವಾಗಿದೆ. ಈ ಸಂದರ್ಭವನ್ನು ಗುರುತಿಸಲು ನಾನು 1.2 ಗ್ರಾಂ ಚಿನ್ನವನ್ನು ಬಳಸಿ ಭಗವಾನ್ ರಾಮನ ಒಂದು ಇಂಚಿನ ಪ್ರತಿಮೆಯನ್ನು ಮಾಡಿದ್ದೇನೆ. ಇದನ್ನು ರಾಮಮಂದಿರ ಟ್ರಸ್ಟ್‌ಗೆ ಕಳುಹಿಸುತ್ತೇನೆ” ಎಂದು ಮರಿಯಪ್ಪನ್ ಸಂತಸದಿಂದ ಹೇಳಿದ್ದಾರೆ.