ಲಕ್ನೋ: ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ರಾಮಂದಿರ ನಿರ್ಮಾಣದೊಂದಿಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಯೋಗಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.
Advertisement
ಇಂದು ಬೆಳಗ್ಗೆ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನವಾಗಿದೆ. ಈ ದಿನವನ್ನು ನಾವೆಲ್ಲರೂ ದೀರ್ಘಕಾಲ ನೆನಪಿನಟ್ಟಿಕೊಳ್ಳಬಹುದು. ರಾಮದೇವಾಲಯದ ನಿರ್ಮಾಣದೊಂದಿಗೆ ಭಾರತದಲ್ಲಿ ‘ರಾಮರಾಜ್ಯ’ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ
Advertisement
Today is a historic day. This day will be remembered for long. I am confident that with construction of Ram Temple, 'Ram Rajya' will be established in India: Yog Guru Ramdev at Hanuman Garhi temple in #Ayodhya pic.twitter.com/ftYeZ0s5LY
— ANI UP/Uttarakhand (@ANINewsUP) August 5, 2020
Advertisement
ಪ್ರಧಾನಿ ಮೋದಿಯವರು ಭೂಮಿ ಪೂಜೆ ಕಾರ್ಯವನ್ನು ನರವೇರಿಸಲಿದ್ದು, ಇದಕ್ಕೂ ಮೊದಲು ಅವರು ಕೂಡ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ
Advertisement
Ayodhya: Sanitisation being done at Hanuman Garhi temple, ahead of Prime Minister Narendra Modi's visit today. pic.twitter.com/8npqffwKUr
— ANI UP/Uttarakhand (@ANINewsUP) August 5, 2020
ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ತೆರಳುತ್ತಿದ್ದಾರೆ ಎಂದು ಹನುಮಂತ ದೇವಾಲಯ ಅರ್ಚಕ ಮಾಧವನ್ ದಾಸ್ ತಿಳಿಸಿದರು. ಇದನ್ನೂ ಓದಿ: ಸುತ್ತ 4 ಚಿಕ್ಕ ಮಂದಿರ – ರಾಮಮಂದಿರದ ಹೊರಗಡೆ ಏನೇನು ಇರಲಿದೆ?
Ayodhya decorated ahead of the foundation stone laying ceremony of #RamMandir today; visuals from Saryu Ghat. pic.twitter.com/S3LPcXVkWF
— ANI UP/Uttarakhand (@ANINewsUP) August 5, 2020