ಹೈದರಾಬಾದ್: ಟಾಲಿವುಡ್ ಬಾಹುಬಲಿ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಆದರೆ ಈ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಕಳೆದ ಒಂದು ವರ್ಷದಿಂದ ಪ್ರಭಾಸ್‍ರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಧೆ ಶ್ಯಾಮ ಸಿನಿಮಾ ಕೊರೊನಾ 2ನೇ ಅಲೆಯಿಂದಾಗಿ ಮುಂದೂಡಲಾಗಿತ್ತು. ಆದರೆ ಇದೀಗ ಚಿತ್ರತಂಡ ಸಿನಿಮಾವನ್ನು ಮುಂದಿನ ವರ್ಷ ಜನವರಿ 14ರಂದು ಅಂದರೆ ಸಂಕ್ರಾಂತಿ ಹಬ್ಬದಂದು ಬಿಡುಗಡೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತಂತೆ ಚಿತ್ರತಂತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಹಂಚಿಕೊಂಡಿದ್ದು, ಹೊಸ ವರ್ಷ, ಹೊಸ ಆರಂಭ ಮತ್ತು ಹೊಸ ಬಿಡುಗಡೆ ದಿನಾಂಕ. ರಾಧೆ ಶ್ಯಾಮ 2022ರ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬದಂದು ತೆರೆ ಮೇಲೆ ಬರಲು ಸಿದ್ಧವಾಗಿದೆ ಎಂದು ಬರೆಯಲಾಗಿದೆ.
New Year. New Beginnings. And a New Release Date! ????????#RadheShyam all set to release in a theatres near you on Makar Sankranti, 14th January 2022
Starring #Prabhas & @hegdepooja pic.twitter.com/FyhaF5kD8W
— UV Creations (@UV_Creations) July 30, 2021
ಒಟ್ಟಾರೆ ಈ ವರ್ಷವಾದರೂ ಪ್ರಭಾಸ್‍ರನ್ನು ತೆರೆ ಮೇಲೆ ನೋಡಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಮುಂದಿನ ವರ್ಷದವರೆಗೂ ಕಾಯಬೇಕಾಲ್ಲ ಎಂದು ನಿರಾಸೆ ಮೂಡಿದೆ. ರಾಧೆ ಶ್ಯಾಮ ಸಿನಿಮಾದಲ್ಲಿ ಪ್ರಭಾಸ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೋಡಿಯಾಗಿದ್ದು, ಈ ಸಿನಿಮಾಕ್ಕೆ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ರಾಧೆ ಶ್ಯಾಮ ಸಿನಿಮಾ ತೆರೆಕಾಣಿಲಿದೆ. ಸದ್ಯ ಸಲಾರ್, ಆದಿಪುರುಷ್ ಇನ್ನೂ ಹೆಸರಿಡದ ಎರಡು ಸಿನಿಮಾ ಹೀಗೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಪ್ರಭಾಸ್ ಕೈನಲ್ಲಿದ್ದು, ಇವು ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‍ಲಾಕ್ ಫೋಟೋ ಶೇರ್ ಮಾಡಿದ ಸೋನಂ ಕಪೂರ್