‘ರಾಧೆ’ ಯನ್ನು ಪೈರಸಿಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ – ಸಲ್ಮಾನ್ ಖಾನ್

salman khan

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ರಾಧೆ ಒಟಿಟಿ ಯಲ್ಲಿ ಬಿಡುಗಡೆಯಾಗಿದ್ದು, ಇದೀಗ ರಾಧೆಯನ್ನು ಪೈರಸಿ ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ. ಇದರಿಂದ ತುಂಬಾ ತೊಂದರೆ ಒಳಗಾಗುತ್ತೀರಿ ಎಂದು ಸಲ್ಲು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

salman khan 2. jpeg

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಲ್ಮಾನ್ ಖಾನ್ ಅವರು, ರಾಧೆ ಚಿತ್ರವನ್ನು ಪೈರಸಿ ಮಾಡಿ ನೋಡದಿರಿ. ಸೈಬರ್ ಸೆಲ್ ನವರು ಪೈರಸಿ ಮಾಡುವ ಸೈಟ್‍ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಸಿಕ್ಕಿಹಾಕಿಕೊಂಡರೆ ತುಂಬಾ ತೊಂದರೆಗೆ ಒಳಾಗಾಗುತ್ತೀರಿ ಹಾಗಾಗಿ ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ.

ಈ ಮೊದಲು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಕುರಿತು ಮಾತನಾಡಿದ ಸಲ್ಲು, ಎಲ್ಲರೂ ಕೂಡ ರಾಧೆ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ. ಅದನ್ನು ಹೊರತು ಪಡಿಸಿ ಕೆಲವು ಪೈರಸಿ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ಯಾರೂ ಕೂಡ ರಾಧೆಯನ್ನು ಪೈರಸಿಯಲ್ಲಿ ನೋಡಲು ಮುಂದಾಗದಿರಿ. ಅರ್ಥ ಮಾಡಿಕೊಳ್ಳಿ. ನಮ್ಮ ಸೂಚನೆಯನ್ನು ಮೀರಿ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡರೆ. ಸೈಬರ್ ಸೆಲ್ ನವರಿಂದ ಭಾರೀ ಸಮಸ್ಯೆಗೊಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಧೆ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ನಾಯಕ ನಟನಾಗಿ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ದಿಶಾ ಪಟಾಣಿ, ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ಮುಂತಾದ ಹಲವು ಕಲಾವಿದರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Comments

Leave a Reply

Your email address will not be published. Required fields are marked *