ಕೋಲಾರ: ನಿವೇಶನ ರಹಿತರಿಗೆ ಭೂ ಮಂಜೂರು ಮಾಡದ ಹಿನ್ನೆಲೆ ರಾತ್ರೋರಾತ್ರಿ ಖಾಸಗಿ ಲೇಔಟ್‍ನಲ್ಲಿರುವ ಸರ್ಕಾರಿ ಜಮೀನಿನಲ್ಲಿ ದಲಿತರು ಗುಡಿಸಲು ನಿರ್ಮಾಣ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ರಾತ್ರೋ ರಾತ್ರಿ ಗುಡಿಸಲುಗಳ ನಿರ್ಮಾ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ ಇರುವ ಹನುಮಂತಪುರ ಸರ್ವೇ ನಂ. 22 ರಲ್ಲಿ ವಿ.ಆರ್.ವೆಂಚರ್ಸ್ ಎಂಬ ಖಾಸಗಿ ಲೇಔಟ್ ನಲ್ಲಿ ಗುಡಿಸಲುಗಳು ನಿರ್ಮಾಣ ಮಾಡಲಾಗಿದೆ.
ಸರ್ವೆ ನಂ.22 ರಲ್ಲಿರುವ 1 ಎಕರೆ 20 ಗುಂಟೆ ಸರ್ಕಾರಿ ಗೋಮಾಳದಲ್ಲಿ ನಿವೇಶನ ರಹಿತರು ಹಾಗೂ ದಲಿತರಿಗೆ ನಿವೇಶನ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದ್ರೆ ಅಲ್ಲೆ ಪಕ್ಕದಲ್ಲೆ 120 ಎಕರೆಯಲ್ಲಿ ನಿರ್ಮಾಣ ವಿ.ಅರ್.ವೆಂಚರ್ಸ್ ಖಾಸಗಿ ಲೇಔಟ್ ಅಭಿವೃದ್ದಿ ಮಾಡಿದ್ದು, ಹತ್ತಾರು ಪರಿಶಿಷ್ಟ ಜಾತಿ, ಪಂಗಡದವರು ರಾತ್ರೋ ರಾತ್ರಿ ಗಿಡಿಸಲುಗಳನ್ನ ನಿರ್ಮಾಣ ಮಾಡಿದ್ದಾರೆ.
ಹುಣಸನಹಳ್ಳಿ, ಹನುಮಂತಪುರ ಗ್ರಾಮದ ಹತ್ತಾರು ದಲಿತ ಕುಟುಂಬಗಳು, ನಿವೇಶನ ರಹಿತರು ಗುಡಿಸಲುಗಳನ್ನ ನಿರ್ಮಾಣ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಹಾಗೂ ತಹಶೀಲ್ದಾರ್ ದಯಾನಂದ್ ಭೇಟಿ ನೀಡಿ ನಿವೇಶನ ರಹಿತರ ಮನವೊಲಿಸುವ ಕಾರ್ಯ ನಡೆಸಿದ್ರು, ಅಲ್ಲದೆ ಸರ್ಕಾರಿ ಜಮೀನು ಉಳಿಸಿಕೊಳ್ಳುವ ಭರವಸೆ ನೀಡಿದ್ದಾರೆ.