ಬೆಂಗಳೂರು: ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿಪಿ) ಡಾ.ಪಿ.ರವೀಂದ್ರನಾಥ್ ರಾಜೀನಾಮೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ತಮಗಿಂತ ಕಿರಿಯ ಅಧಿಕಾರಿ, ರ್ಯಾಂಕಿಗ್‍ನಲ್ಲೂ ಮೊದಲಿಲ್ಲದವರಿಗೆ ಬಡ್ತಿ ನೀಡಲಾಗಿದೆ ಎಂದು ಬೇಸರಗೊಂಡು ರವೀಂದ್ರನಾಥ್ ರಾತ್ರಿ 10.30 ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರಾಜಿನಾಮೆ ಪತ್ರ ಇಟ್ಟು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಗಿದೆ.
Advertisement
Advertisement
ಈ ಕುರಿತು ಮಾತನಾಡಿರುವ ಅವರು, ಇಂದು ನಿವೃತ್ತರಾಗಲಿರುವ ಟಿ.ಸುನಿಲ್ ಕುಮಾರ್ ಅವರಿಗೆ 2020ರ ಅಕ್ಟೋಬರ್ 28ರಂದು ಎಡಿಜಿಪಿ ಶ್ರೇಣಿಯಿಂದ ಪೊಲೀಸ್ ಮಹಾ ನೀರ್ದೇಶನಾಲಯ (ಡಿಜಿಪಿ) ಶ್ರೇಣಿಗೆ ಬಡ್ತಿ ನೀಡಲಾಗಿದೆ. ರ್ಯಾಂಕಿಗ್ ಇಲ್ಲದ ಹಾಗೂ ತನಗಿಂತ ಕಿರಿಯವರಾದ ಸುನೀಲ್ ಕುಮಾರ್ ಗೆ ಡಿಜಿಯಾಗಿ ಕಾನೂನು ಬಾಹಿರವಾಗಿ ಬಡ್ತಿ ನೀಡಿದ್ದಾರೆ ಎಂದು ರವೀಂದ್ರನಾಥ್ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಯಾವುದೇ ಪೋಸ್ಟ್ ಮೇಲಿರುವ ಆಸೆಗಾಗಿ ರಾಜೀನಾಮೆ ಕೊಟ್ಟಿಲ್ಲ. ನಾನು ಕೂಟ್ಟ ಅಪ್ಲಿಕೇಷನ್‍ನ್ನು ಕಡಗಣನೆ ಮಾಡಿ ಸರ್ಕಾರ ಜ್ಯೂನಿಯರ್‍ಗೆ ಪ್ರಮೋಷನ್ ಕೊಟ್ಟಿದೆ. ಸೀರಿಯಲ್ ಪ್ರಕಾರ ನಂಬರ್ 2 ನಲ್ಲಿದ್ದೇನೆ. ನಂಬರ್ 5 ಸುನೀಲ್ ಕುಮಾರ್ ಇದ್ದಾರೆ. ಆದರೂ ಕಾನೂನು ಬಾಹಿರವಾಗಿ ಬಡ್ತಿ ನೀಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ತಿಳಿಸಿದ್ದಾರೆ.
Advertisement
ನಿವೃತ್ತಿ ಆಗುವುದಕ್ಕೂ ಮುನ್ನ ಬಡ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಬಡ್ತಿ ಪೋಸ್ಟ್ ಗೆ ಬರಬೇಕಾದ ಎಲ್ಲ ಸೌಲಭ್ಯ ಸಿಗುತ್ತವೆ. ನಾನು ಮಾಡುತ್ತಿರುವುದು ಕ್ರೆಡಿಬಿಲಿಟಿ, ಡಿಗ್ನಿಟಿಗೊಸ್ಕರ. ಈಗ ನಾನು ಮಾತಾನಾಡಿದಕ್ಕೆ ನನ್ನ ಸಸ್ಪೆಂಡ್ ಮಾಡಬಹುದು. ರಾಜೀನಾಮೆ ಕೊಟ್ಟ ಮೇಲೆ ನಾಳೆ ಬನ್ನಿ ಮಾತಾಡೋಣ ಎಂದಿದ್ದಾರೆ. ಅಟೆಂಡ್ ಪರೇಡ್ ಆ್ಯಂಡ್ ಮೀಟ್ ಮಿ ಎಂದು ಹೇಳಿದ್ದಾರೆ. ಐಪಿಎಸ್ ಅಧಿಕಾರಿಗಳು ಹೇಳಿದಂತೆ ನಾವು ಕುಣಿಯಬೇಕು. ಇದು ಪರೋಕ್ಷ ಕಿರುಕುಳವಾಗುತ್ತಿದೆ. ಅದಕ್ಕೆ ನಾನು ಪರೇಡ್ ಗೂ ಕೂಡ ಹೋಗಿಲ್ಲ. ನನ್ನದು ಇನ್ನೂ ಮೂರು ವರ್ಷ ಸರ್ವಿಸ್ ಇದೆ. ಹೀಗಾಗಿ ಇವರನ್ನು ನಿಯಂತ್ರಣದಲ್ಲಿಡಬೇಕು ಎಂದು ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಬೇಸರಗೊಂಡು ರಾಜೀನಾಮೆ ನೀಡುವುದೇ ಸೂಕ್ತ ಎನಿಸಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ನಾನು ಈ ಹಿಂದೆ ಮೂರು ಬಾರಿ ರಾಜೀನಾಮೆ ಕೊಟ್ಟಿದ್ದೇನೆ. ಈ ಕಾರಣ ಸುಪ್ರೀಂ ಕೋರ್ಟ್ 2014ರಲ್ಲಿ ಸ್ಟೇ ನೀಡಿತ್ತು. ಇದೀಗ ಅದರ ಅವಧಿ ಸಹ ಮುಗಿದಿದೆ. ಸುಪ್ರೀ ಕೋರ್ಟ್ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಮಾಡಿದ್ದೇನೆ ಎಂಬ ಆರೋಪದ ಮೇಲೆ ಮತ್ತೆ ದೆಹಲಿಗೆ ನಾನು ಹೋಗಬಹುದು. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದಕ್ಕೆ ಡಿಇ ಆರ್ಡರ್ ಆಗಿದೆ. ಆದರೆ ಈಗ ನನಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ.