ಮಂಗಳೂರು: ರಾತ್ರಿ ಬೀಚ್ ಬಳಿ ಅಕ್ರಮ ಚಟುವಟಿಕೆ ಮಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಪಣಂಬೂರು, ಉಳ್ಳಾಲ, ಸುರತ್ಕಲ್, ಸೋಮೇಶ್ವರ ಬೀಚ್ ರಾತ್ರಿ ವೇಳೆ ಮದ್ಯಪಾನ ಹಾಗೂ ಗಾಂಜಾ ಸೇವಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ 75ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಾರ್ನಿಂಗ್ ಮಾಡಿದ್ದಾರೆ.
ಅನಗತ್ಯವಾಗಿ ಬೀಚ್ ಬಳಿ ಕುಳಿತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಮಂಗಳೂರು ಟೌನ್ ಹಾಲ್ ಬಳಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರ ಮಾಹಿತಿ ಸಂಗ್ರಹಿಸಿ ಅವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದ ತಂಡ ದಾಳಿ ಮಾಡಿದೆ. ಮದ್ಯದ ಬಾಟಲಿಗಳು, ಸೈಡ್ಸ್, ಗಾಂಜಾ, ಒಂದು ಡ್ಯಾಗರ್, ಹಲವು ಕಾರು-ಬೈಕ್ ಗಳ ಸಮೇತ ವಶಕ್ಕೆ ಪಡೆಯಲಾಗಿದೆ.