ಬೆಂಗಳೂರು: ರಾತ್ರಿ ಪಾಳಿಯಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿಯ ಗನ್ ಕಳವು ಮಾಡಿರುವ ಘಟನೆ ಫೆಬ್ರವರಿ 1 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹರೀಶ್ ಜೆ.ಎಂ ಗನ್ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್. ಖಾಸಗಿ ಸೆಕ್ಯುರಿಟಿ ಏಜೆನ್ಸಿಯ ಸಿಬ್ಬಂದಿಯಾಗಿದ್ದ ಹರೀಶ್, ಎಂ.ಜಿ ರೈಲ್ವೆ ಕಾಲೋನಿಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಫೆ.1ರ ಬೆಳಗ್ಗಿನ ಜಾವ ನಿದ್ರೆಗೆ ಜಾರಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಅನ್ ಲೋಡೆಡ್ ಡಬಲ್ ಬ್ಯಾರಲ್ ಗನ್, ಮೊಬೈಲ್ ಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.