ಸ್ಯಾಂಡಲ್ವುಡ್ ನಟಿ ಸುಮಲತಾ ಅಂಬರೀಶ್ (Sumalatha Ambareesh) ಮೊಮ್ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಮುದ್ದು ಮೊಮ್ಮಗನಿಗೆ ‘ರಾಣಾ ಅಮರ್ ಅಂಬರೀಶ್’ ಎಂದು ನಾಮಕರಣ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವ ಪುತ್ರನಿಗೆ ‘ರಾಣಾ ಅಮರ್ ಅಂಬರೀಶ್’ (Raana Amar Ambareesh) ಎಂದು ಹೆಸರಿಡಲಾಗಿದೆ.
ಇನ್ನೂ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಸಿನಿಮಾ ಇಂಡಿಸ್ಟ್ರಿಗೆ ಎಂಟ್ರಿ ಕೊಟ್ಮೇಲೆ ಅಂಬರೀಶ್ ಎಂದು ಅವರು ಬದಲಿಸಿದ್ದರು. ಅವರ ಮೂಲ ಹೆಸರನ್ನೇ ರಾಣಾ ಹೆಸರಿನ ಜೊತೆ ಅಮರ್ ಮತ್ತು ಅಂಬರೀಶ್ ಎಂದು ಸೇರಿಸಲಾಗಿದೆ.