ರಾಜ್ಯ ಬಿಜೆಪಿಗೆ ಮತ್ತೆ ಶಾಕ್ ನೀಡಿದ ಹೈಕಮಾಂಡ್

Public TV
1 Min Read
MODI AMITH SHA JP NADDA GADKARI SANTOSH

ಬೆಂಗಳೂರು: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮತ್ತೆ ಶಾಕ್ ನೀಡಿದೆ. ನಮ್ಮ ತಂಡಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡುತ್ತೇವೆ ಎಂಬ ಸಂದೇಶವನ್ನು ಮತ್ತೆ ರವಾನಿಸಿದೆ.

ಕ್ಯಾಬಿನೆಟ್ ಪುನಾರಚನೆ ವಿಚಾರದಲ್ಲಿ ಯಾರಿಗೂ ಮಣೆ ಹಾಕದೇ ಹೈಕಮಾಂಡ್ ಡೋಂಟ್ ಕೇರ್ ಎಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಯಾರ ಸಲಹೆಯನ್ನೂ ಹೈಕಮಾಂಡ್ ಸ್ವೀಕರಿಸಿಲ್ಲ. ಆದರೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಸ್ವಲ್ಪ ಮಟ್ಟಿಗೆ ಹಸ್ತಕ್ಷೇಪ ಮಾಡಿದ್ದು ಅವರ ಸಲಹೆಯನ್ನು ಸ್ವೀಕರಿಸಿದೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ: ಭಾವುಕರಾದ ನಾರಾಯಣಸ್ವಾಮಿ

amit shah jp nadda modi

ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ ಅವರನ್ನು ಆರ್‌ಎಸ್‌ಎಸ್‌ ಸಲಹೆಯ ಮೇರೆಗೆ ಆಯ್ಕೆ ಮಾಡಲಾಗಿದೆ. ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಪರ ಬಿ.ಎಲ್.ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಕರ್ನಾಟಕದ ನಾಯಕರಿಗೆ ಹೈಕಮಾಂಡ್ ಶಾಕ್ ನೀಡುವುದು ಹೊಸದೆನಲ್ಲ. ಈ ಹಿಂದೆ ಕರ್ನಾಟಕ ವಿಧಾನಸಭಾ, ಲೋಕಸಭಾ ಚುನಾವಣೇ ಸಂದರ್ಭದಲ್ಲೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡಿತ್ತು. ಇದಾದ ಬಳಿಕ ಯಡಿಯೂರಪ್ಪ ಸರ್ಕಾರದಲ್ಲಿ 3 ಡಿಸಿಎಂ ಸೃಷ್ಟಿಸಿ ಅಧಿಕಾರವನ್ನು ಹಂಚಿಕೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *