ಉಡುಪಿ: ಕರಾವಳಿ ಕಾವಲು ಪೊಲೀಸ್ ತಂಡ ಈ ಬಾರಿಯ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಕ್ರಿಕೆಟ್ ಕಪ್ ಗೆದ್ದಿದೆ. ಎಸ್‍ಪಿ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಗಿದೆ.
Advertisement
72 ನೇ ಗಣರಾಜ್ಯೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾಡಳಿತ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಡಿಸಿ ಇಲೆವೆನ್, ಉಡುಪಿ ಜಿಲ್ಲಾ ಪೊಲೀಸ್, ಕರಾವಳಿ ಕಾವಲು ಪೊಲೀಸ್, ಜಿಲ್ಲಾ ಸರಕಾರಿ ವೈದ್ಯರ ತಂಡ, ಜಿಲ್ಲಾ ಪಂಚಾಯತ್ ಮತ್ತು ಪತ್ರಕರ್ತರ ತಂಡ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.
Advertisement
Advertisement
ನಿಗದಿತ 10 ಓವರ್ ಗಳ ಮೊದಲ ಪಂದ್ಯದಲ್ಲಿ ಕರಾವಳಿ ಪೊಲೀಸರ ತಂಡ ಜಿಲ್ಲಾ ವೈದ್ಯಾಧಿಕಾರಿಗಳ ತಂಡವನ್ನು ಸೋಲಿಸಿತು. ಡಿಸಿ ಇಲೆವೆನ್ ಮತ್ತು ಜಿಲ್ಲಾ ಪೊಲೀಸ್ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಲೀಗ್ ಪಂದ್ಯದಲ್ಲಿ ಎಸ್ ಪಿ. ವಿಷ್ಣುವರ್ಧನ್ ನೇತೃತ್ವದ ತಂಡ ವಿಜಯಿಯಾಯಿತು. ಸೆಮಿ ಫೈನಲ್ ನಲ್ಲಿ ಪತ್ರಕರ್ತರ ತಂಡ ಜಿಲ್ಲಾ ಪೊಲೀಸ್ ತಂಡದ ಎದುರು ಸೋಲನ್ನು ಅನುಭವಿಸಿತು. ಸಿಇಒ ನವೀನ್ ಭಟ್ ನೇತೃತ್ವದ ಜಿಲ್ಲಾ ಪಂಚಾಯತ್ ತಂಡವನ್ನು ಸಿಎಸ್‍ಪಿ ತಂಡ ಮಣಿಸಿ ಫೈನಲ್ ಗೆ ಪ್ರವೇಶಿಸಿತು.
Advertisement
ಕರಾವಳಿ ಕಾವಲು ಪೊಲೀಸ್ ತಂಡ ಉಡುಪಿ ಜಿಲ್ಲಾ ಪೊಲೀಸ್ ತಂಡವನ್ನು ಮಣಿಸಿ 2020 ಗಣರಾಜ್ಯೋತ್ಸವ ಕಪ್ ಗೆದ್ದಿದೆ. ಗೆಲ್ಲುವ ಹಾಟ್ ಫೇವರೆಟ್ ತಂಡವೆಂದು ಬಿಂಬಿತವಾಗಿದ್ದ ಜಿಲ್ಲಾ ಪೊಲೀಸ್ ತಂಡ ರೋಚಕ ತಿರುವು ಕಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜಿಲ್ಲಾ ಪೊಲೀಸ್ ತಂಡದಲ್ಲಿ ಆಡಿದ ಪ್ರಶಾಂತ್ ಪಡುಕೆರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಓ ನವೀನ್ ಭಟ್, ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಚೂಡ ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲೆಯ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡರು.