ಶಿವಮೊಗ್ಗ: ಕೋವಿಡ್ ವಿಚಾರದಲ್ಲಿ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೋ ಗೊತ್ತಿಲ್ಲ. ರಾಜ್ಯಪಾಲರೇ ನೇರವಾಗಿ ಸಭೆ ಕರೆದಿರುವುದು ಆಶ್ಚರ್ಯ ತರಿಸಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ರಾಜ್ಯಪಾಲರು ಸಭೆ ಕರೆಯಬಾರದು ಎಂದು ಏನಿಲ್ಲ. ಆದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇರಬೇಕಾದರೆ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ. ಇದು ಹೊಸ ವ್ಯವಸ್ಥೆ ಆಯ್ತಾ ಎಂಬ ಅನುಮಾನ ನನಗೆ ಕಾಡುತ್ತಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಮಿತಿ ಮೀರಿದೆ. ರಾಜ್ಯಪಾಲರು ಸಭೆ ಕರೆದಿರುವುದರಿಂದ ಈ ವಿಚಾರದಲ್ಲಿ ಸೀರಿಯಸ್ ನೆಸ್ ಬಂದಿದೆ. ರಾಜ್ಯಪಾಲರ ಸಭೆ ಹಾಗೂ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂಬ ಆಶಯ ಇದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.