– ಧಗಧಗನೇ ಹೊತ್ತಿ ಉರಿದ ತೆಂಗಿನಮರ
ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯ ಆರ್ಭಟಕ್ಕೆ ನಾಲ್ವರು ಬಲಿ ಆಗಿದ್ದಾರೆ. ರಾಯಚೂರಿನ ಲಿಂಗಸೂಗೂರಿನಲ್ಲಿ ಸಿಡಿಲು ಹೊಡೆದು ಕುರಿಗಾಹಿ ಮತ್ತು 20 ಕುರಿ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರದಲ್ಲಿ ಸಿಡಿಲಿಗೆ ಮಹಿಳೆಯೊಬ್ಬರು ಬಲಿ ಆಗಿದ್ದಾರೆ.
ಜಯನಗರ ಜಿಲ್ಲೆಯಲ್ಲಿ ಇಬ್ಬರು ಸಿಡಿಲಿಗೆ ಬಲಿ ಆಗಿದ್ದಾರೆ. ಗದಗ, ಚಿಕ್ಕಮಗಳೂರು ಮತ್ತು ಮಂಡ್ಯದಲ್ಲಿ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರಗಳು ಧಗಧಗನೇ ಹೊತ್ತಿ ಉರಿದಿವೆ. ಕೋಲಾರದಲ್ಲಿ ರಾತ್ರಿಯಿಡಿ ವರುಣ ಅಬ್ಬರಿಸಿದ್ದಾನೆ. ತಗ್ಗು ಪ್ರದೇಶದ ಮನೆಗಳಿಗೆ ನೀರುನುಗ್ಗಿ ಅವಾಂತರ ಉಂಟಾಗಿದೆ. ದಿಢೀರ್ ಮಳೆಯಿಂದಾಗಿ ಕೋಲಾರ ಜಿಲ್ಲೆಯ ಮಾವು ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡಿ ಜಿಟಿ ಜಿಟಿ ಮಳೆ ಆಗಿದೆ. ಕೊಡಗು ಹೀಗೆ ಎಲ್ಲಾ ಕಡೆ ಗುಡುಗು ಸಿಡಿಲು ಸಹಿತ ಜೋರು ಮಳೆ ಆಗಿದೆ. ರಾಜಾಸೀಟ್‍ನಲ್ಲಿ ಮರವೊಂದು ಧರೆಗುರುಳಿದೆ. ವಾಯುಭಾರ ಕುಸಿತದಿಂದ ಇನ್ನೆರಡು ದಿನಗಳ ಕಾಲ ಕರ್ನಾಟಕ, ಆಂಧ್ರ ಸೇರಿ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆಯ ರಾಜ್ಯ ನಿರ್ದೇಶಕ ಸಿ.ಎಸ್ .ಪಾಟೀಲ್ ಎಚ್ಚರಿಕೆ ನೀಡಿದ್ದಾರೆ