ಉಡುಪಿ: ಒಂದೆಡೆ ಕೊರೊನಾ, ಮತ್ತೊಂದೆಡೆ ನೆರೆ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಪ್ರವಾಹದ ಪರಿಹಾರವನ್ನು ಕೊರೊನಾ ನಿಯಮ ಮೀರಿ ಮಾಡಲಾಗುವುದಿಲ್ಲ. ಇವತ್ತು ರಾಜ್ಯ ಸಚಿವರ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್ ಇದೆ. ಈ ಬಗ್ಗೆ ಎಲ್ಲಾ ಚರ್ಚೆ ನಡೆಸುತ್ತೇವೆ ಎಂದು ಗೃಹ, ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
Advertisement
ಉಡುಪಿಯಲ್ಲಿ ನೆರೆ ವೀಕ್ಷಣೆ ಸಂದರ್ಭ ಮಾಧ್ಯಮಗಳ ಜೊತೆ ಬೊಮ್ಮಾಯಿ ಮಾತನಾಡಿದರು. ಗಂಜಿ ಕೇಂದ್ರದಲ್ಲಿ ಕೊರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಮುಂಜಾಗೃತೆ ಕಷ್ಟವಾದರೂ ಮಾಡಲೇಬೇಕಾದ ಪರಿಸ್ಥಿತಿ ಇದೆ ಎಂದರು. ಪ್ರಧಾನಮಂತ್ರಿ ಜೊತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ನೆನ್ನೆ ಚರ್ಚಿಸಿದ್ದೇವೆ. ರಾಜ್ಯದ ಎರಡು ಪ್ರಮುಖ ಸಮಸ್ಯೆಯ ಕುರಿತು ಮಾತನಾಡಿದ್ದೇವೆ. ಕಡಲ್ಕೊರತಕ್ಕೆ ಶಾಶ್ವತ ಪರಿಹಾರದ ಬಗ್ಗೆ ಚರ್ಚೆಯಾಗಿದೆ. ಎಡಿಬಿ ನೆರೆವಿನೊಂದಿಗೆ ಶಾಶ್ವತ ಪರಿಹಾರದ ಬಗ್ಗೆ ಮಾತನಾಡಿದ್ದೇನೆ. ಕಡಲ್ಕೊರೆತ ನಿಯಂತ್ರಣ ಕ್ಕೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ ಇಟ್ಟಿದ್ದೇವೆ ಎಂದರು.
Advertisement
Advertisement
ಸೂಕ್ಷ್ಮ ಪ್ರದೇಶಗಳ ಸರ್ವೇ: ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಆಗುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸರ್ವೇ ಮಾಡಬೇಕು. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮೂಲಕ ಸರ್ವೇ ಮಾಡಬೇಕು. ಸರ್ವೇಯ ಜೊತೆಗೆ ಮ್ಯಾಪಿಂಗ್ ಕೂಡಾ ಮಾಡಿಸಬೇಕಾಗಿದೆ. ಭೂಕುಸಿತ ತಡೆ ಹಾಗೂ ಶಾಶ್ವತ ಪುನರ್ವಸತಿ ಕುರಿತು ಚರ್ಚಿಸಿದ್ದೇವೆ ಎಂದರು. ಈ ನಡುವೆ ಭಾರೀ ಮಳೆ ಹಾನಿಗೆ ತುತ್ತಾದ ಉಡುಪಿ ಜಿಲ್ಲೆಗೆ ಎನ್ ಡಿಆರ್ ಎಫ್ ಮೂಲಕ 10 ಕೋಟಿ ಬಿಡುಗಡೆ ಮಾಡುತ್ತೇನೆ. ಈ ಪರಿಹಾರದ ಹಣವನ್ನು ರಕ್ಷಣೆ ಹಾಗೂ ಪುನರ್ವಸತಿಗೆ ಬಳಕೆ ಮಾಡಲಾಗುವುದು ಎಂದರು.
Advertisement
ಪಡುಬಿದ್ರೆ ಬೀಚ್ ಅಬ್ಬರ- ಗೃಹ ಸಚಿವರ ಮೇಲೆ ಅಪ್ಪಳಿಸಿದ ಸಮುದ್ರದಲೆhttps://t.co/HMJIIclksX#PadubudreBeach #BasavarajBommai #udupi
— PublicTV (@publictvnews) August 11, 2020