ಮೈಸೂರು: ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 5 ಮೃಗಾಲಯಗಳಲ್ಲಿ ಸಿಂಹ, ಚಿರತೆ ಹಾಗೂ ಹುಲಿಗಳಿವೆ. ಈ ಪ್ರಾಣಿಗಳಿಗೆ ಮಾತ್ರ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ. ಆದರೆ ಯಾವುದೇ ಪ್ರಾಣಿಗಳಿಗೆ ಸೋಂಕಿನ ಲಕ್ಷಣ ಕಾಣಿಸಿಲ್ಲ. ನಾವು ಕೇಂದ್ರದ ಎಲ್ಲ ಮಾರ್ಗಸೂಚಿ ಅನುಸಿರಿಸಿದ್ದೇವೆ. ನಮ್ಮ ನಿರ್ದೇಶಕರು ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ. ಸೋಂಕು ತಗುಲಿದ ಪ್ರಾಣಿಗೆ ಕೆಮ್ಮು ಬರುತ್ತೆ. ನಂತರ ಊಟ ಬಿಡುತ್ತವೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇರುವ ಯಾವುದೇ ಪ್ರಾಣಿಗಳು ಇಲ್ಲ ಎಂದು ತಿಳಿಸಿದರು.
ಬಹುಶಃ ಹೈದರಾಬಾದ್ ಮೃಗಾಲಯದಲ್ಲಿ ಅಸಿಂಪ್ಟಮೆಟಿಕ್ ಕೀಪರ್ ನಿಂದ ಸೋಂಕು ಬಂದಿರಬಹುದು. ಅಲ್ಲಿನ ಪ್ರಾಣಿಗಳಿಗೆ ಬೂಸ್ಟರ್ ಕೊಡುತ್ತಾರೆ. ನಾವು ಆ ರೀತಿಯ ಸಮಸ್ಯೆ ಆದರೆ ನೀರಿನಲ್ಲಿ ಬೂಸ್ಟರ್ ಕೊಡುತ್ತೇವೆ. ಸದ್ಯ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಕೊರೊನಾ ಆತಂಕ ಇಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳಿದ್ದಾರೆ.