ನವದೆಹಲಿ: ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದೆ. ಇಂದು 36 ಮಂದಿ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಈ ಪೈಕಿ ಕರ್ನಾಟಕಕ್ಕೆ ಬಂಪರ್ ಪಾಲೇ ಸಿಕ್ಕಿದೆ. ರಾಜ್ಯ ನಾಲ್ವರು ಸಂಸದರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ, ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ವಿಧಿ ಬೋಧಿಸಿದರು. ಇದನ್ನೂ ಓದಿ: ಮೋದಿ ಕ್ಯಾಬಿನೆಟ್‍ನಿಂದ ರವಿಶಂಕರ್ ಪ್ರಸಾದ್, ಜಾವಡೇಕರ್ ಔಟ್
Advertisement
Advertisement
ಈ ನಾಲ್ವರೊಂದಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರ ಸಂಖ್ಯೆ ಆರಕ್ಕೇರಿದೆ. ಈಗಾಗಲೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಹ್ಲಾದ್ ಜೋಷಿ, ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸಂಪುಟದ ಆಯಾಕಟ್ಟಿನ ಜಾಗಗಳಲ್ಲಿ ಇದ್ದಾರೆ.
Advertisement
ಶೋಭಾ ಕರಂದ್ಲಾಜೆ ಸಚಿವೆ ಆಗುವ ಮೂಲಕ ಸರೋಜಿನಿ ಮಹಿಷಿ, ಬಸವರಾಜೇಶ್ಚರಿ, ರತ್ನಮಾಲಾ ಸವಣೂರು, ಡಿಕೆ ತಾರಾದೇವಿ, ಮಾರ್ಗರೇಟ್ ಆಳ್ವಾ ಬಳಿಕ ಸಂಪುಟ ಸೇರಿದ ರಾಜ್ಯದ ಆರನೇ ಮಹಿಳೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ನಿರೀಕ್ಷೆಯಂತೆ ಮೋದಿ ಸಂಪುಟದಿಂದ ಡಿವಿ ಸದಾನಂದಗೌಡರಿಗೆ ಕೊಕ್ ನೀಡಲಾಗಿದೆ.
Advertisement
ಶೋಭಾ ಕರಂದ್ಲಾಜೆ:
2014, 2019ರಲ್ಲಿ ಸತತ ಎರಡು ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಕರಾವಳಿ, ಒಕ್ಕಲಿಗ ಕೋಟಾ, ಡಿವಿಎಸ್ ಸ್ಥಾನಕ್ಕೆ ಭರ್ತಿ ಮಾಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಸಚಿವೆಯಾಗಿ ಮಾಡಿದ್ದ ಕೆಲಸ, ಅನುಭವವನ್ನು ಪರಿಗಣಿಸಲಾಗಿದೆ. ಆರ್‍ಎಸ್‍ಎಸ್, ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಇವರು ಅಂತರವನ್ನು ಕಾಯ್ದುಕೊಂಡಿದ್ದರು.
ಭಗವಂತ ಖೂಬಾ:
ಬೀದರ್ ಸಂಸದಾಗಿರುವ ಇವರನ್ನು ಕಲ್ಯಾಣ ಕರ್ನಾಟಕ, ಲಿಂಗಾಯತ ಕೋಟಾ, ಸುರೇಶ್ ಅಂಗಡಿ ಸ್ಥಾನಕ್ಕೆ ಭರ್ತಿ ಮಾಡಲಾಗಿದೆ.ಆರ್‌ಎಸ್‌ಎಸ್ ಹಿನ್ನೆಲೆ, ಪಕ್ಷ ನಿಷ್ಠ ಅಲ್ಲದೇ ಎಂಜಿನಿಯರ್ ಪದವಿಯನ್ನು ಓದಿದ್ದಾರೆ. ಹೈಕಮಾಂಡ್ ಮಟ್ಟದ ನಾಯಕರ ಆಪ್ತ ವಲಯಕ್ಕೆ ಖುಬಾ ಸೇರಿದ್ದಾರೆ.
ನಾರಾಯಣಸ್ವಾಮಿ:
ಚಿತ್ರದುರ್ಗ ಸಂಸದರಾಗಿರುವ ಇವರು ದಲಿತ ಎಡಗೈ ಕೋಟಾವನ್ನು ಪ್ರತಿನಿಧಿಸುತ್ತಿದ್ದಾರೆ. ಯುವ ಮುಖ ಅಲ್ಲದೇ ಮೊದಲ ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಜೊತೆ ಗುರುತಿಸಿಕೊಂಡಿದ್ದಾರೆ.
ರಾಜೀವ್ ಚಂದ್ರಶೇಖರ್:
3ನೇ ಬಾರಿ ರಾಜ್ಯಸಭಾ ಸದಸ್ಯರಾಗಿರುವ ಇವರಿಗೆ ಇದೇ ಮೊದಲ ಬಾರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮೂಲ ಕೇರಳವಾಗಿದ್ದರೂ ಕರ್ನಾಟಕದ ರಾಜ್ಯಸಭಾ ಕೋಟಾದಿಂದ ಆಯ್ಕೆ ಮಾಡಲಾಗಿದೆ. ಹಲವು ಸಂಸದೀಯ ಸಮಿತಿಗಳಲ್ಲಿ ಚುರುಕಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ.