ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುರೇವಿ ಚಂಡಮಾರುತ ಎದ್ದಿದೆ. ಪ್ರತಿ ಗಂಟೆಗೆ 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸ್ತಿದೆ. ಡಿಸೆಂಬರ್ 3ರ ರಾತ್ರಿ ಅಥವಾ ಡಿಸೆಂಬರ್ 4ರ ಬೆಳಗ್ಗೆ ತಮಿಳುನಾಡು ಮತ್ತು ಕನ್ಯಾಕುಮಾರಿಗೆ ಸೈಕ್ಲೋನ್, ಎಫೆಕ್ಟ್ ಆಗಲಿದೆ. ಇದರ ಪರಿಣಾಮ ಡಿಸೆಂಬರ್ 5ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ. ಈ ಎರಡು ದಿನವೂ ಜಿಟಿ ಜಿಟಿ ಹಾಗೂ ತುಂತುರು ಮಳೆಯಾಗಲಿದೆ. ಡಿಸೆಂಬರ್ 6 ಮತ್ತು 7ರಂದು ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಇಂದಿನಿಂದ 6ರವರೆಗೆ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಧಾರವಾಡದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 23-19
ಮಂಗಳೂರು: 33-25
ಶಿವಮೊಗ್ಗ: 31-21
ಬೆಳಗಾವಿ: 31-18
ಮೈಸೂರು: 26-21
ಮಂಡ್ಯ: 26-21
ರಾಮನಗರ: 26-21
ಮಡಿಕೇರಿ: 24-18
ಹಾಸನ: 26-19
ಚಾಮರಾಜನಗರ: 24-21
ಚಿಕ್ಕಬಳ್ಳಾಪುರ: 21-18
ಕೋಲಾರ: 23-19
ತುಮಕೂರು: 25-19
ಉಡುಪಿ: 34-26
ಕಾರವಾರ: 34-26
ಚಿಕ್ಕಮಗಳೂರು: 26-19
ದಾವಣಗೆರೆ: 31-21
ಚಿತ್ರದುರ್ಗ: 27-20
ಹಾವೇರಿ: 32-20
ಬಳ್ಳಾರಿ: 31-21
ಧಾರವಾಡ: 31-18
ಗದಗ: 31-19
ಕೊಪ್ಪಳ: 31-20
ರಾಯಚೂರು: 32-19
ಯಾದಗಿರಿ: 32-18
ವಿಜಯಪುರ: 23-19
ಬೀದರ್: 29-15
ಕಲಬುರಗಿ: 32-17
ಬಾಗಲಕೋಟೆ: 32-19