– ರೇಣುಕಾಚಾರ್ಯ ಜೋಕರ್ ಇದ್ದಂಗೆ!
ಕೊಪ್ಪಳ: ಮುಂದಿನ ಸಿಎಂ ಸಿದ್ದರಾಮಯ್ಯನವರು ಆಗಬೇಕೆಂದು ನಾನು, ರಾಘವೇಂದ್ರ ಹಿಟ್ನಾಳ್ ಹೇಳಿರುವುದಲ್ಲ. ರಾಜ್ಯದ ಪ್ರವಾಸ ಮಾಡಿದಾಗ ಜನರೇ ಹೇಳುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ನೀಡಿರುವ ಕಾರ್ಯಕ್ರಮಗಳನ್ನು ಯಾರೂ ನೀಡಲು ಆಗುವುದಿಲ್ಲ, ರಾಜ್ಯ ಅಭಿವೃದ್ಧಿ ಆಗಬೇಕಾದರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಅಂತ ಜನರು ಹೇಳುತ್ತಾರೆ. ಆದರೆ ಸಿಎಂ ಯಾರಾಗ ಬೇಕೆನ್ನುವುದನ್ನು ನಾಯಕರು ತೀರ್ಮಾನ ಮಾಡಬೇಕು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ಏನಾದರೂ ಆಗಲಿ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಜನರು ಮಾತನಾಡುತ್ತಾರೆ. ಮುಂದಿನ ಸಿಎಂ ಬಗ್ಗೆ ಮಾತನಾಡಬಾರದೆಂದು ಹೈಕಮಾಂಡ್ ಸೂಚನೆ ಹಿನ್ನೆಲೆ, ನನಗೆ ಏಕೆ ನೋಟಿಸ್ ಕೊಡಬೇಕು, ನಾನು ಸಿಎಂ ಎಂದು ಘೋಷಣೆ ಮಾಡಿಲ್ಲ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ರಾಜ್ಯದ ಜನರ ಅಭಿಪ್ರಾಯ ಹೇಳಿದ್ದೇನೆ. ನಾವು ಹೇಳಿದ ತಕ್ಷಣ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡ್ತಾರಾ ಎಂದು ಪ್ರಶ್ನಿಸಿದರು.
ರೇಣುಕಾಚಾರ್ಯ ಪ್ಲೇಯಿಂಗ್ ಕಾರ್ಡ್‍ನಲ್ಲಿ ಜೋಕರ್ ಇದ್ದಂಗೆ, ನಮ್ಮ ಪಕ್ಷದ ವಿಷಯ ಆತನಿಗೆ ಏಕೆ, ಜೋಕರ್‍ನನ್ನು ಎಲ್ಲಿ ಬೇಕಾದರೂ ಕೂಡಿಸಿಕೊಳ್ಳಬಹುದು. ಹಾಗೇ ರೇಣುಕಾಚಾರ್ಯ ಜೋಕರ್ ಇದ್ದಂಗೆ, ಆತನ ಬಗ್ಗೆ ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ, ನೂರಕ್ಕೆ ನೂರು ನಾನು ಸಿದ್ದರಾಮಯ್ಯ ಅವರಿಗೆ ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ, ಸಿದ್ದರಾಮಯ್ಯ ನನ್ನ ಕ್ಷೇತ್ರಕ್ಕೆ ಬಂದು ಅರ್ಜಿ ಹಾಕಲಿ, 70 ಸಾವಿರ ಲೀಡ್ ನಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ. ಅವರು ಬೇರೆ ಕಡೆ ಟೂರ್ ಮಾಡಿದರೆ 25 ಸೀಟ್ ಹೆಚ್ಚಿಗೆ ಬರುತ್ತವೆ. ಹೀಗಾಗಿ ಸೀಟ್ ಬಿಟ್ಟುಕೊಡಲು ಸಿದ್ಧವಾಗಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬೇಕೆಂದು ರಾಜ್ಯದ ಜನರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.