ಕಾರವಾರ: ಪೆಟ್ರೋಲ್ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ರಾಜ್ಯದಲ್ಲಿ ಬಳ್ಳಾರಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.
Advertisement
ಶಿರಸಿ ನಗರದ ಬಂಕ್‍ಗಳಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ್ದು, ಭಾನುವಾರ ಪ್ರತಿ ಲೀಟರ್‍ಗೆ 100.28 ರೂ. ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಶನಿವಾರ ಶತಕ ಮುಟ್ಟಿದ್ದ ದರ ಮತ್ತಷ್ಟು ಏರಿಕೆ ಕಂಡಿದ್ದು, ಉತ್ತರ ಕನ್ನಡದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದ ಶಿರಸಿ ನಗರದಲ್ಲಿ 8 ಬಂಕ್‍ಗಳಿವೆ. ಬಹುತೇಕ ಎಲ್ಲ ಕಡೆಯಲ್ಲೂ ದರ ಸಾಮ್ಯತೆ ಇದೆ. ರಾಜ್ಯದ ಉಳಿದ ಕಡೆಗಳಿಗಿಂತಲೂ ಹೆಚ್ಚು ದರ ದಾಖಲಾಗುವ ಮೂಲಕ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ದಾಖಲೆ ಬರೆದಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ
Advertisement
ತೈಲೋತ್ಪನ್ನಗಳು ಮಂಗಳೂರಿನಿಂದ ನಗರಕ್ಕೆ ಪೂರೈಕೆಯಾಗುತ್ತವೆ. ಕೆಲವೊಮ್ಮೆ ಹುಬ್ಬಳ್ಳಿಗೆ ತಲುಪಿ ಅಲ್ಲಿಂದ ಶಿರಸಿಗೆ ಬರಬೇಕಾಗುತ್ತದೆ. ಹೀಗಾಗಿ ಉಳಿದ ನಗರಕ್ಕೆ ಹೋಲಿಸಿದರೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು ಎನ್ನುತ್ತಾರೆ ಶಿರಸಿಯ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ.
Advertisement
Advertisement
ಈವರೆಗೆ ಪೆಟ್ರೋಲ್ ಬೆಲೆ ಈ ಪ್ರಮಾಣದಲ್ಲಿ ಏರಕೆಯಾಗಿರಲಿಲ್ಲ. ತೈಲ ಕಂಪನಿಗಳು ಪ್ರತಿದಿನ ದರ ಪರಿಷ್ಕರಣೆ ಮಡುತ್ತಿದ್ದು, ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿದೆ. ಆದರೆ ರಾಜ್ಯದಲ್ಲೇ ಶಿರಸಿ ಭಾಗದಲ್ಲಿ ಅತೀ ಹೆಚ್ಚು ದರ ದಾಖಲಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳತೊಡಗಿದೆ.