-ಬೆಂಗಳೂರಿನಲ್ಲಿ ಮತ್ತೆ 4 ಸಾವಿರ ಕೇಸ್
-ಬಳ್ಳಾರಿ 462, ಕೊಪ್ಪಳ 352, ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ಕರ್ನಾಟಕದಲ್ಲಿಂದು 8,811 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5,417 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾಗೆ ರಾಜ್ಯದಲ್ಲಿಂದು 86 ಮಂದಿ ಸಾವನ್ನಪ್ಪಿದ್ದು, 832 ಸೋಂಕಿತರು ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಕೊರೊನಾ ಮಹಾಮಾರಿಗೆ 8,503 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,66,023ಕ್ಕೆ ಏರಿಕೆಯಾಗಿದ್ದು, 1,01,782 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವ 1,66,267 ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ ದಾಟುತ್ತಿದೆ. ಇಂದು ಸಿಲಿಕಾನ್ ಸಿಟಿಯ 4,083 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 27 ಸೋಂಕಿತರು ಮರಣ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ 2,16,630ಕ್ಕೆ ಏರಿಕೆ ಆಗಿದೆ.
ಇಂದಿನ 26/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/yjsEfAgr5p pic.twitter.com/CttQaPas9d
— K'taka Health Dept (@DHFWKA) September 26, 2020
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 147, ಬಳ್ಳಾರಿ 462, ಬೆಳಗಾವಿ 132, ಬೆಂಗಳೂರು ಗ್ರಾಮಾಂತರ 241, ಬೆಂಗಳೂರು ನಗರ 4,083, ಬೀದರ್ 56, ಚಾಮರಾಜನಗರ 63, ಚಿಕ್ಕಬಳ್ಳಾಪುರ 164, ಚಿಕ್ಕಮಗಳೂರು 109, ಚಿತ್ರದುರ್ಗ 70, ದಕ್ಷಿಣ ಕನ್ನಡ 420, ದಾವಣಗೆರೆ 144, ಧಾರವಾಡ 232, ಗದಗ 44, ಹಾಸನ 239, ಹಾವೇರಿ 111, ಕಲಬುರಗಿ 249, ಕೊಡಗು 79, ಕೋಲಾರ 165, ಕೊಪ್ಪಳ 352, ಮಂಡ್ಯ 255, ಮೈಸೂರು 73, ರಾಯಚೂರು 92, ರಾಮನಗರ 73, ಶಿವಮೊಗ್ಗ 254, ತುಮಕೂರು 141, ಉಡುಪಿ 57, ಉತ್ತರ ಕನ್ನಡ 104, ವಿಜಯಪುರ 67 ಮತ್ತು ಯಾದಗಿರಿಯಲ್ಲಿ 133 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.