ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂದು 7,184 ಹೊಸ ಪ್ರಕರಣಗಳು ವರದಿಯಾಗಿವೆ. ಇಂದು ರಾಜ್ಯದಲ್ಲಿ ಕೊರೊನಾದಿಂದ 71 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.
Advertisement
ರಾಜ್ಯದ ವಿವಿಧ ಆಸ್ಪತ್ರೆಗಳಿಂದ 8,893 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸಾವನ್ನಪ್ಪಿದವರ ಸಂಖ್ಯೆ 10,427ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,58,574ಕ್ಕೆ ಏರಿಕೆಯಾಗಿದ್ದು, 1,10,647 ಸಕ್ರಿಯ ಪ್ರಕರಣಗಳಿವೆ. ಸದ್ಯ 940 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಮರಣ ಪ್ರಮಾಣ ಶೇ.0.98ರಷ್ಟಿದೆ. ಸೋಂಕು ಖಚಿತ ಪ್ರಮಾಣ ಶೇ.7.7 ಇದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 152, ಬಳ್ಳಾರಿ 189, ಬೆಳಗಾವಿ 298, ಬೆಂಗಳೂರು ಗ್ರಾಮಾಂತರ 220, ಬೆಂಗಳೂರು ನಗರ 3,371, ಬೀದರ್ 10, ಚಾಮರಾಜನಗರ 49, ಚಿಕ್ಕಬಳ್ಳಾಪುರ 124, ಚಿಕ್ಕಮಗಳೂರು 129, ಚಿತ್ರದುರ್ಗ 80, ದಕ್ಷಿಣ ಕನ್ನಡ 172, ದಾವಣಗೆರೆ 41, ಧಾರವಾಡ 99, ಗದಗ 49, ಹಾಸನ 220, ಹಾವೇರಿ 61, ಕಲಬುರಗಿ 40, ಕೊಡಗು 77, ಕೋಲಾರ 78, ಕೊಪ್ಪಳ 65, ಮಂಡ್ಯ 192, ಮೈಸೂರು 501, ರಾಯಚೂರು 54, ರಾಮನಗರ 25, ಶಿವಮೊಗ್ಗ 129, ತುಮಕೂರು 281, ಉಡುಪಿ 210, ಉತ್ತರ ಕನ್ನಡ 123, ವಿಜಯಪುರ 69 ಮತ್ತು ಯಾದಗಿರಿಯಲ್ಲಿ 76 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement