-ಇಂದು 8,856 ಮಂದಿಗೆ ಸೋಂಕು, 87 ಸಾವು
-ಮೈಸೂರು 564, ಹಾಸನ 446, ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ. ಇಂದು 8,856 ಮಂದಿಗೆ ಸೋಂಕು ತಗುಲಿದ್ದು, 8,890 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,01,767ಕ್ಕೆ ಏರಿಕೆಯಾಗಿದ್ದು, ಇಂದು ಮಹಾಮಾರಿಗೆ 87 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 1,07,616 ಸಕ್ರಿಯ ಪ್ರಕರಣಗಳಿದ್ದು, 821 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಕೊರೊನಾದಿಂದಾಗಿ ರಾಜ್ಯದಲ್ಲಿ 8,864 ಜರನು ಪ್ರಾಣ ಕಳೆದುಕೊಂಡಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ಇಂದು ಸಹ 4 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇಂದು ರಾಜಧಾನಿಯಲ್ಲಿ 4,226 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,32,663ಕ್ಕೆ ಏರಿಕೆಯಾಗಿದೆ. ಇವತ್ತು 24 ಮಂದಿಯನ್ನು ಮಾಹಾಮರಿ ಕೊರೊನಾ ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 2,936ಕ್ಕೆ ಏರಿಕೆಯಾಗಿದೆ. ಕೇವಲ ಬೆಂಗಳೂರಿನಲ್ಲಿಯೇ 47,145 ಸಕ್ರಿಯ ಪ್ರಕರಣಗಳಿವೆ.
Advertisement
ಇಂದಿನ 30/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/mEZ9HiSANA pic.twitter.com/yDIXNS25FN
— K'taka Health Dept (@DHFWKA) September 30, 2020
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 51, ಬಳ್ಳಾರಿ 109, ಬೆಳಗಾವಿ 243, ಬೆಂಗಳೂರು ಗ್ರಾಮಾಂತರ 188, ಬೆಂಗಳೂರು ನಗರ 4,226, ಬೀದರ್ 28, ಚಾಮರಾಜನಗರ 50, ಚಿಕ್ಕಬಳ್ಳಾಪುರ 89, ಚಿಕ್ಕಮಗಳೂರು 167, ಚಿತ್ರದುರ್ಗ 180, ದಕ್ಷಿಣ ಕನ್ನಡ 240, ದಾವಣಗೆರೆ 173, ಧಾರವಾಡ 128, ಗದಗ 67, ಹಾಸನ 446, ಹಾವೇರಿ 134, ಕಲಬುರಗಿ 97, ಕೊಡಗು 96, ಕೋಲಾರ 78, ಕೊಪ್ಪಳ 87, ಮಂಡ್ಯ 244, ಮೈಸೂರು 564, ರಾಯಚೂರು 93, ರಾಮನಗರ , ಶಿವಮೊಗ್ಗ 248, ತುಮಕೂರು 362, ಉಡುಪಿ 139, ಉತ್ತರ ಕನ್ನಡ 146, ವಿಜಯಪುರ 80 ಮತ್ತು ಯಾದಗಿರಿಯಲ್ಲಿ 59 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.