ಬೆಂಗಳೂರು: ನಿನ್ನೆಗಿಂತ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇಂದು 5,983 ಜನಕ್ಕೆ ಸೋಂಕು ತಗುಲಿದ್ದು, 138 ಸೋಂಕಿರನ್ನು ಮಾಹಾಮಾರಿ ಬಲಿ ಪಡೆದುಕೊಂಡಿದೆ.
Advertisement
ಇಂದು 10,685 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 1,46,726 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 33,434 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಮತ್ತಷ್ಟು ಇಳಿಕೆಯಾಗಿದ್ದು, ಇಂದು ಶೇ.3.77ರಷ್ಟಿದೆ. ಕೋವೀಡ್-19 ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.2.30ರಷ್ಟಿದೆ.
Advertisement
Advertisement
ರಾಜ್ಯದಾದ್ಯಂತ 1,58,442 (ರಾಪಿಡ್ ಆಂಟಿಜನ್ ಟೆಸ್ಟ್ 43,640+ಆರ್.ಟಿ ಪಿಸಿಆರ್ 1,15,802) ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನಲ್ಲಿಂದು 1,209 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 17 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 78,943 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಂಕಿಯಲ್ಲಿದೆ. ಬಾಗಲಕೋಟೆ, ಬೀದರ್, ಚಿತ್ರದುರ್ಗ, ಗದಗ, ಕೊಡಗು ಮತ್ತು ಯಾದಗಿರಿಯಲ್ಲಿ ಮರಣ ರಾಕ್ಷಸಿ ಶೂನ್ಯ ಸುತ್ತಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 22, ಬಳ್ಳಾರಿ 128, ಬೆಳಗಾವಿ 172, ಬೆಂಗಳೂರು ಗ್ರಾಮಾಂತರ 226, ಬೆಂಗಳೂರು ನಗರ 1,209, ಬೀದರ್ 8, ಚಾಮರಾಜನಗರ 98, ಚಿಕ್ಕಬಳ್ಳಾಪುರ 118, ಚಿಕ್ಕಮಗಳೂರು 198, ಚಿತ್ರದುರ್ಗ 110, ದಕ್ಷಿಣ ಕನ್ನಡ 679, ದಾವಣಗೆರೆ 153, ಧಾರವಾಡ 86, ಗದಗ 34, ಹಾಸನ 424, ಹಾವೇರಿ 42, ಕಲಬುರಗಿ 25, ಕೊಡಗು 152, ಕೋಲಾರ 145, ಕೊಪ್ಪಳ 48, ಮಂಡ್ಯ 309, ಮೈಸೂರು 596, ರಾಯಚೂರು 16, ರಾಮನಗರ 37, ಶಿವಮೊಗ್ಗ 229, ತುಮಕೂರು 289, ಉಡುಪಿ 166, ಉತ್ತರ ಕನ್ನಡ 169, ವಿಜಯಪುರ83 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.