– 57 ಮಂದಿ ಬಲಿ
– ಬೆಂಗಳೂರಿನಲ್ಲಿ 1,447 ಮಂದಿಗೆ ಕೊರೊನಾ
ಬೆಂಗಳೂರು: ಇಂದು ರಾಜ್ಯದಲ್ಲಿ 2,313 ಮಂದಿಗೆ ಕೋವಿಡ್ 19 ಸೋಂಕು ಬಂದಿದ್ದು, 57 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,003 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಈ ಪೈಕಿ 13,836 ಮಂದಿ ಬಿಡುಗಡೆಯಾಗಿದ್ದು, 19,035 ಸಕ್ರಿಯ ಪ್ರಕರಣಗಳಿವೆ.
ಇಂದು ಬೆಂಗಳೂರಿನಲ್ಲಿ 1,447, ದಕ್ಷಿಣಕನ್ನಡದಲ್ಲಿ 139 ಮಂದಿಗೆ ಸೋಂಕು ಬಂದಿದೆ. ಇಲ್ಲಿಯವರೆಗೆ ಒಟ್ಟು 543 ಮಂದಿ ಮೃತಪಟ್ಟಿದ್ದು, 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 1147, ದಕ್ಷಿಣ ಕನ್ನಡ 139, ವಿಜಯಪುರ 89, ಬಳ್ಳಾರಿ 66, ಕಲಬುರಗಿ 58, ಯಾದಗಿರಿ 51, ಮೈಸೂರು 51, ಧಾರವಾಡ 50, ಹಾವೇರಿ 42, ಉಡುಪಿ 34, ಉತ್ತರ ಕನ್ನಡ 33, ಕೊಡಗು 33, ಮಂಡ್ಯ 31, ರಾಯಚೂರು 25, ರಾಮನಗರ 23, ದಾವಣಗೆರೆ 21, ಬೀದರ್ 19, ಗದಗ್ 19, ಬೆಳಗಾವಿ 15, ಚಿಕ್ಕಬಳ್ಳಾಪುರ 12, ತುಮಕೂರು 10, ಕೋಲಾರ 9, ಚಾಮರಾಜನಗರ 9, ಕೊಪ್ಪಳ 7, ಹಾಸನ 6, ಶಿವಮೊಗ್ಗ 6, ಬಾಗಲಕೋಟೆ 6, ಬೆಂಗಳೂರು ಗ್ರಾಮೀಣದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 1003 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರು 601, ಬಳ್ಳಾರಿ 77, ಕಲಬುರಗಿ 52, ದಕ್ಷಿಣ ಕನ್ನಡ 46, ಮಂಡ್ಯ 35, ಶಿವಮೊಗ್ಗ 28, ಮೈಸೂರು 25, ರಾಯಚೂರು 20, ಚಾಮರಾಜನಗರ 18, ಚಿಕ್ಕಮಗಳೂರು 13, ವಿಜಯಪುರ 13, ಧಾರವಾಡ 13, ದಾವಣಗೆರೆ 11, ಉತ್ತರ ಕನ್ನಡ 10, ರಾಮನಗರ 10, ಚಿಕ್ಕಬಳ್ಳಾಪುರ 10, ಉಡುಪಿ 7, ಚಿತ್ರದುರ್ಗ 6, ಯಾದಗಿರಿ 5, ಕೊಡಗು 2, ಕೊಪ್ಪಳದಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.
ಐಸಿಯುನಲ್ಲಿ ಎಷ್ಟು ಮಂದಿ?
ಒಟ್ಟು 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 301, ಧಾರವಾಡ 18, ರಾಯಚೂರು 18, ಕಲಬುರಗಿ 20, ಬಳ್ಳಾರಿ 20, ಬೀದರ್ 11, ಮಂಡ್ಯ 11, ಮೈಸೂರು 9, ಬೆಳಗಾವಿ 9, ಗದಗ 8, ತುಮಕೂರು 8, ದಕ್ಷಿಣ ಕನ್ನಡ 5, ದಾವಣಗೆರೆ 5, ಶಿವಮೊಗ್ಗ 09, ಕೊಪ್ಪಳ 3, ಹಾಸನ 6, ಚಿಕ್ಕಬಳ್ಳಾಪುರ 4, ಬಾಗಲಕೋಟೆ 2, ಉಡುಪಿ 3, ಚಾಮರಾನಗರ 4, ಕೊಡಗು 2, ಹಾವೇರಿ 2, ವಿಜಯಪುರ 1, ಉತ್ತರ ಕನ್ನಡ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.