ಬೆಂಗಳೂರು: ರಾಜ್ಯದಲ್ಲಿಂದು 1,522 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 12 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 2,133 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಒಟ್ಟು ಸೋಂಕಿತರ ಸಂಖ್ಯೆ 8,82,608ಕ್ಕೆ ಏರಿಕೆಯಾಗಿದ್ದು, 24,757 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 11,750ಕ್ಕೆ ಏರಿಕೆಯಾಗಿದ್ದು, 384 ಸೋಂಕಿತರ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಕೋವಿಡ್ -19 ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ.1.37 ಮತ್ತು ಮರಣ ದರ ಶೇ.0.78ರಷ್ಟಿದೆ. ಇಂದು 1,10,724 ಸ್ಯಾಂಪಲ್ ಗಳು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜಧಾನಿಯಲ್ಲಿ 719 ಹೊಸ ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಸದ್ಯ 18,366 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 17, ಬಳ್ಳಾರಿ 22, ಬೆಳಗಾವಿ 43, ಬೆಂಗಳೂರು ಗ್ರಾಮಾಂತರ 41, ಬೆಂಗಳೂರು ನಗರ 719, ಬೀದರ್ 10, ಚಾಮರಾಜನಗರ 10, ಚಿಕ್ಕಬಳ್ಳಾಪುರ 41, ಚಿಕ್ಕಮಗಳೂರು 29, ಚಿತ್ರದುರ್ಗ 46, ದಕ್ಷಿಣ ಕನ್ನಡ 61, ದಾವಣಗೆರೆ 28, ಧಾರವಾಡ 22, ಗದಗ 2, ಹಾಸನ 46, ಹಾವೇರಿ 19, ಕಲಬುರಗಿ 32, ಕೊಡಗು 10, ಕೋಲಾರ 3, ಕೊಪ್ಪಳ 10, ಮಂಡ್ಯ 32, ಮೈಸೂರು 77, ರಾಯಚೂರು 24, ರಾಮನಗರ 13, ಶಿವಮೊಗ್ಗ 25, ತುಮಕೂರು 72, ಉಡುಪಿ 29, ಉತ್ತರ ಕನ್ನಡ 22, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಚಿಕ್ಕಬಳ್ಳಾಪುರದ ಒಂದೇ ಗ್ರಾಮದಲ್ಲಿ 14 ಮಂದಿಗೆ ಕೊರೊನಾhttps://t.co/QDEBzluwFI#chikkaballapura #CoronaVirus #COVID19 #KannadaNews
— PublicTV (@publictvnews) November 28, 2020