– ಬೆಂಗಳೂರಿನಲ್ಲಿ 18,319 ಸಕ್ರಿಯ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ 1,291 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಂದು 19 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ.
ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,83,899ಕ್ಕೆ ಏರಿಕೆಯಾಗಿದ್ದು, ಸದ್ಯ 24,503 ಸಕ್ರಿಯ ಪ್ರಕರಣಗಳಿವೆ. ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 11,765ಕ್ಕೆ ಏರಿಕೆಯಾಗಿದ್ದು, 374 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 1,530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.22 ಮತ್ತು ಮರಣ ಪ್ರಮಾಣ ಶೇ.1.16ರಷ್ಟಿದೆ. ಇಂದು 1,05,428 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ 686 ಹೊಸ ಪ್ರಕರಣಗಳು ವರದಿಯಾಗಿದ್ದು, 10 ಜನ ಸಾವನ್ನಪ್ಪಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ 18,319 ಸಕ್ರಿಯ ಪ್ರಕರಣಗಳಿವೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 13, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 38, ಬೆಂಗಳೂರು ನಗರ 686, ಬೀದರ್ 8, ಚಾಮರಾಜನಗರ 5, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು 25, ಚಿತ್ರದುರ್ಗ 23, ದಕ್ಷಿಣ ಕನ್ನಡ 48, ದಾವಣಗೆರೆ 15, ಧಾರವಾಡ 16, ಗದಗ 9, ಹಾಸನ 41, ಹಾವೇರಿ 10, ಕಲಬುರಗಿ 19, ಕೊಡಗು 11, ಕೋಲಾರ 12, ಕೊಪ್ಪಳ 3, ಮಂಡ್ಯ 48, ಮೈಸೂರು 37, ರಾಯಚೂರು 18, ರಾಮನಗರ 1, ಶಿವಮೊಗ್ಗ 22, ತುಮಕೂರು 39, ಉಡುಪಿ 38, ಉತ್ತರ ಕನ್ನಡ 21, ವಿಜಯಪುರ 25 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.