-ಬೆಂಗ್ಳೂರಿನಲ್ಲಿ 735 ಮಂದಿಗೆ ಡೆಡ್ಲಿ ವೈರಸ್, ಡಿಸ್ಚಾರ್ಜ್ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತೊಮ್ಮೆ ಸಾವಿರದ ಗಡಿ ದಾಟಿದ್ದು, ಇಂದು 1,272 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16,514ಕ್ಕೇರಿಕೆಯಾಗಿದೆ. 1272ರ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿಯೇ 735 ಸೋಂಕಿತರಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಒಬ್ಬ ರೋಗಿಯೂ ಡಿಸ್ಚಾರ್ಜ್ ಆಗಿಲ್ಲ.
ರಾಜ್ಯದಲ್ಲಿ ಸದ್ಯ 8194 ಸಕ್ರಿಯ ಪ್ರಕರಣಗಳಿದ್ದು, 292 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಸಹ ಕೊರೊನಾ ಏಳು ಜನರನ್ನು ಬಲಿ ಪಡೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 253ಕ್ಕೆ ಏರಿಕೆಯಾಗಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 01/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/YQcgY2KdtT @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/sttx21jEqg
— K'taka Health Dept (@DHFWKA) July 1, 2020
ಇಂದು ಬಿಡುಗಡೆಯಾದ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ 28, ಹಾಸನ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರಗಿ 14, ರಾಮನಗರ 14, ಕೊಪ್ಪಳ 13, ರಾಯಚೂರು 12, ಚಿತ್ರದುರ್ಗ 12, ಯಾದಗಿರಿ, ಬೀದರ್, ಬೆಳಗಾವಿ ತಲಾ 8, ಕೊಡಗು 7, ಕೋಲಾರ, ಮಂಡ್ಯ ತಲಾ 5, ಶಿವಮೊಗ್ಗ 3, ಗದಗ 2 ಮತ್ತು ಚಿಕ್ಕಮಗಳೂರಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿವೆ.