ಬೆಂಗಳೂರು: ಇಂದು ರಾಜ್ಯದಲ್ಲಿ 1,238 ಹೊಸ ಕೊರೊನಾ ಪ್ರಕರಣಗಳ ವರದಿಯಾಗಿದ್ದು, 12 ಜನರನ್ನು ಮಾಹಾಮರಿ ಬಲಿ ಪಡೆದುಕೊಂಡಿದೆ. ಇಂದು ವಿವಿಧ ಆಸ್ಪತ್ರೆಗಳಿಂದ 5,076 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,97,801ಕ್ಕೆ ಏರಿಕೆಯಾಗಿದ್ದು, 11,912 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 19,206 ಸಕ್ರಿಯ ಪ್ರಕರಣಗಳಿದ್ದು, 258 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19ಸೋಂಕಿನ ಖಚಿತ ಪ್ರಮಾಣ ಶೇ.1.46 ಮತ್ತು ಮರಣ ಪ್ರಮಾಣ ಶೇ.0.96ರಷ್ಟಿದೆ. ಇಂದು 84,270 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 7, ಬಳ್ಳಾರಿ 27, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 701, ಬೀದರ್ 2 ಚಾಮರಾಜನಗರ 22, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು 9, ಚಿತ್ರದುರ್ಗ 22, ದಕ್ಷಿಣ ಕನ್ನಡ 30, ದಾವಣಗೆರೆ 15, ಧಾರವಾಡ 9, ಗದಗ 3, ಹಾಸನ 42, ಹಾವೇರಿ 10, ಕಲಬುರಗಿ 26, ಕೊಡಗು 13, ಕೋಲಾರ 13, ಕೊಪ್ಪಳ 4, ಮಂಡ್ಯ 46, ಮೈಸೂರು 53, ರಾಯಚೂರು 10, ರಾಮನಗರ 13, ಶಿವಮೊಗ್ಗ 5, ತುಮಕೂರು 36, ಉಡುಪಿ 15, ಉತ್ತರ ಕನ್ನಡ 12, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.