ಬೆಂಗಳೂರು: ಇಂದು 1,210 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,807 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 16 ಜನರನ್ನ ಕೊರೊನಾ ಮಹಾಮಾರಿ ಬಲಿ ಪಡೆದುಕೊಂಡಿದೆ.
Advertisement
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,99,011ಕ್ಕೆ ಏರಿಕೆಯಾಗಿದ್ದು, 11,928 ಮಂದಿಗೆ ಸಾವನ್ನಪ್ಪಿದ್ದಾರೆ. 18,593 ಸಕ್ರಿಯ ಪ್ರಕರಣಗಳಿದ್ದು, 253 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.19 ಮತ್ತು ಮರಣ ಪ್ರಮಾಣ ಶೇ.1.32ರಷ್ಟಿದೆ. ಇಂದು 1,00,846 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 20, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 659, ಬೀದರ್ 2, ಚಾಮರಾಜನಗರ 8, ಚಿಕ್ಕಬಳ್ಳಾಪುರ 52, ಚಿಕ್ಕಮಗಳೂರು 25, ಚಿತ್ರದುರ್ಗ 40, ದಕ್ಷಿಣ ಕನ್ನಡ 29, ದಾವಣಗೆರೆ 27, ಧಾರವಾಡ 18, ಗದಗ 2, ಹಾಸನ 45, ಹಾವೇರಿ 1, ಕಲಬುರಗಿ 17, ಕೊಡಗು 16, ಕೋಲಾರ 19, ಕೊಪ್ಪಳ 6, ಮಂಡ್ಯ 26, ಮೈಸೂರು 44, ರಾಯಚೂರು 16, ರಾಮನಗರ 5, ಶಿವಮೊಗ್ಗ 4, ತುಮಕೂರು 27, ಉಡುಪಿ 20, ಉತ್ತರ ಕನ್ನಡ 12, ವಿಜಯಪುರ 14 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.