ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತೊಂದು ದಾಖಲೆ ಮಾಡಿದ್ದು, ಕೊರೊನಾ ಸಾವುಗಳ ಪಟ್ಟಿಯಲ್ಲಿ 10 ಸಾವಿರದ ಮೈಲಿಗಲ್ಲನ್ನು ಇಂದು ಕರ್ನಾಟಕ ದಾಟಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ರಾಜ್ಯದಲ್ಲಿ ಇಂದು 7,606 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 70 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 10,036ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,17,915ಕ್ಕೇರಿದೆ. ಅಲ್ಲದೇ ಸಕ್ರಿಯ ಪ್ರಕರಣ ಸಂಖ್ಯೆಯೂ 1,15,776 ಕ್ಕೇರಿದೆ.
Advertisement
Advertisement
ಉಳಿದಂತೆ ಇಂದು ಆಸ್ಪತ್ರೆಯಿಂದ 12,030 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 5,92,084 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 928 ಮಂದಿ ರಾಜ್ಯ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ.
Advertisement
ಇಂದು 23,564 ಮಂದಿಗೆ ರ‍್ಯಾಪಿಡ್ ಟೆಸ್ಟ್, 55,193 ಆರ್.ಟಿ ಪಿಸಿಆರ್ ಮತ್ತು ಇತರ ಟೆಸ್ಟ್ ಗಳನ್ನು ಮಾಡಲಾಗಿದೆ. ಅಂದರೇ ಇವತ್ತು ಒಟ್ಟಾರೆ 78,757 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ 22,63,973 ರ‍್ಯಾಪಿಡ್ ಟೆಸ್ಟ್ ಮತ್ತು 37,67,007 ಆರ್.ಟಿ ಪಿಸಿಆರ್ ಮತ್ತು ಇತರೇ ಟೆಸ್ಟ್ ಗಳನ್ನು ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಇಂದು 3,498 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,85,055ಕ್ಕೇರಿದೆ. ಬೆಳಗಾವಿ 444, ಚಿತ್ರದುರ್ಗ 210, ದಕ್ಷಿಣ ಕನ್ನಡ 303, ಹಾಸನ 278, ಮೈಸೂರು 264, ಉಡುಪಿ 317 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬಳ್ಳಾರಿ 78, ಬೆಂಗಳೂರು ನಗರ 346, ಚಾಮರಾಜನಗರ 40, ಧಾರವಾಡ 93, ಹಾಸನ 49, ಕಲಬುರಗಿ 37 ಮಂದಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.