ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಕೊರೊನಾ ಬ್ಲಾಸ್ಟ್ ಆಗಿದೆ. ನಿನ್ನೆ ಒಂದೇ ದಿನ ಸೋಂಕಿತರ ಸಂಖ್ಯೆ ಸಾವಿರ ಸನಿಹಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಹಳೆಯ ರೂಲ್ಸ್ ಜಾರಿಯಾಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ.
ಸೋಂಕಿತರ ಸಂಖ್ಯೆ 1,500 ದಾಟಿದ್ರೆ ಲಾಕ್‍ಡೌನ್ ಫಿಕ್ಸಾ..? ಮತ್ತೆ ನೈಟ್ ಕರ್ಫ್ಯೂ, ಸೀಲ್‍ಡೌನ್ ಜಾರಿಗೆ ಬರುತ್ತಾ ಎಂಬ ಗುಮಾನಿ ಎದ್ದಿದೆ. ಇಂದು ತಜ್ಞರ ಜೊತೆ ಸಿಎಂ ಮಹತ್ವದ ಮೀಟಿಂಗ್ ಮಾಡಲಿದ್ದಾರೆ. ಕೊರೊನಾ ಕಂಟ್ರೋಲ್, ಸೆಕೆಂಡ್ ವೇವ್ ಬಗ್ಗೆ ಸಭೆಯಲ್ಲಿ ಸಿಎಂ ಚರ್ಚಿಸಲಿದ್ದಾರೆ. ಇತ್ತ ಆರೋಗ್ಯ ಇಲಾಖೆ ಈಗಾಗಲೆ ಒಂದಷ್ಟು ಸಲಹೆಗಳನ್ನು ನೀಡಿದೆ.
Advertisement
Advertisement
ಪ್ರತಿ ದಿನ ಒಂದೂವರೆ ಸಾವಿರ ಕೇಸ್ ದಾಟಿದ್ರೆ ನೈಟ್ ಕಫ್ರ್ಯೂಗೆ ಚಿಂತನೆ. ಕೊರೊನಾ ಕೇಸ್ ಹೆಚ್ಚಳದ ಬಗ್ಗೆ 1 ವಾರ ಕಾದು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಸದ್ಯ ನಡೆಯುತ್ತಿರುವ ಕೊರೊನಾ ಟೆಸ್ಟಿಂಗ್ ಡಬಲ್ ಮಾಡಲು ಪ್ಲ್ಯಾನ್ ಮಾಡಬಹುದು.
Advertisement
ಕೇಸ್ ಹೆಚ್ಚಾಗುತ್ತಿರುವ ಜಿಲ್ಲೆಗಳ ಟೆಸ್ಟಿಂಗ್ ಸೆಂಟರ್ ಏರಿಕೆ ಮಾಡಬೇಕು. ಹೈರಿಸ್ಕ್ ವ್ಯಕ್ತಿಗಳಿಗೆ ಕಡ್ಡಾಯ ವ್ಯಾಕ್ಸಿನೇಷನ್, ಲಸಿಕೆಗೆ ನೂತನ ಜಾಗೃತಿ ಕ್ರಮ ಜಾರಿಗೆ ತರಬಹುದು. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು ಕ್ಲಸ್ಟರ್ ಆದರೆ ಡೇಂಜರ್ ಆಗುತ್ತೆ. ಹೀಗಾಗಿ ಹೆಲ್ತ್ ವರ್ಕರ್ಸ್, ಆರೋಗ್ಯ ಕಾರ್ಯರ್ತರು ಲಸಿಕೆ ಪಡೆಯಲು ಉತ್ತೇಜನ ನೀಡಬಹುದು.
Advertisement
ಈಗ ಸಭೆ ಸಮಾರಂಭಗಳಿಗೆ ಜಾರಿಯಾಗಿರುವ ರೂಲ್ಸ್ ಫಾಲೋ ಮಾಡಲು ಹೆಚ್ಚು ಒತ್ತು. ಜಾರಿಯಾಗಿರುವ ಟಫ್‍ರೂಲ್ಸ್ ಕಟ್ಟು-ನಿಟ್ಟಾಗಿ ಪಾಲನೆಯ ಪರೀಕ್ಷೆಗೆ ನಿಗಾ ಘಟಕಗಳ ರಚನೆ ಮಾಡಬಹುದು. ರಾಜ್ಯದ ಗಡಿ ಭಾಗಗಳಲ್ಲಿ ಟೆಸ್ಟಿಂಗ್ ಸೆಂಟರ್ ಹೆಚ್ಚಿಸಿ, ಮುಂದಿನ ವಾರದ ಹೊತ್ತಿಗೆ ಏರಿಕೆ ಆದ್ರೆ ಮತ್ತೆ ಮಾರ್ಕೆಟ್‍ಗಳಿಗೆ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆಗಳಿವೆ.
ಒಂದು ವೇಳೆ ಕೇಸ್ ಹೆಚ್ಚಾದ್ರೆ ಅಂತರ್ ರಾಜ್ಯ ಪ್ರಯಾಣಿಕರಿಗೆ ಟೆಸ್ಟಿಂಗ್, ಕಡ್ಡಾಯ ಕ್ವಾರಂಟೈನ್ ರೂಲ್ಸ್ ಪಾಲನೆ ಮಾಡಬೇಕಾಗುವ ಸಾಧ್ಯತೆಗಳಿವೆ.