ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಭಾರೀ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್‌ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಇಂದು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಯಾವೆಲ್ಲ ಅಂಗಡಿಗಳು ತೆರೆದಿರಬೇಕು ಎಂಬುದರ ಬಗ್ಗೆ ಮತ್ತೊಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ಆದೇಶ ಮೇ 4ರವರೆಗೆ ಜಾರಿಯಲ್ಲಿರಲಿದೆ.
Advertisement
Advertisement
ಯಾರಿಗೆಲ್ಲ ಅನುಮತಿ?
– ದಿನಸಿ, ಹಣ್ಣು, ತರಕಾರಿ ಡೈರಿ, ಮಾಂಸ, ಔಷಧಿ, ಪ್ರಾಣಿಗಳ ಆಹಾರದ ಅಂಗಡಿಗೆ ಅನುಮತಿ
– ಹೊಲ್ ಸೇಲ್ ತರಕಾರಿ, ಹಣ್ಣು ಹೂವು ಅಂಗಡಿ ತೆರೆಯಬಹುದು
– ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅವಕಾಶ
– ಹೊಟೇಲ್, ಲಾಡ್ಜಿಂಗ್ ಹೊರಗಿನಿಂದ ಬಂದ ಅತಿಥಿಗಳಿಗೆ ಮಾತ್ರ ಅನುಮತಿ
– ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ
– ಬ್ಯಾಂಕ್, ಎಟಿಎಂ ಇನ್ಶುರೆನ್ಸ್ ಕಂಪನಿಗಳಿಗೆ ತೆರೆಯಲು ಅವಕಾಶ
Advertisement
Advertisement
– ಪೇಪರ್, ಟಿವಿ,ಮೀಡಿಯಾ ಕಂಪನಿಗಳಿಗೆ ತೆರೆಯಲು ಅವಕಾಶವಿದೆ
– ಇ -ಕಾಮರ್ಸ್ ಸೇವೆಯ ಕಚೇರಿಗಳಿಗೆ ತರೆಯಬಹುದು
– ಶೇರ್ ಮಾರ್ಕೇಟ್ ನಡೆಸುವ ಸೇವಾ ಕಚೇರಿ, ಕೋಲ್ಡ್ ಸ್ಟೋರೆಜ್, ವೇರ್ ಹೌಸ್ ಗಳ ತೆರೆಯಲು ಅನುಮತಿ
– ಖಾಸಗಿ ಸೆಕ್ಯೂರಿಟಿ ಏಜೆನ್ಸಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ತೆರೆಯಲು ಅವಕಾಶ
– ಕಟ್ಟಡ ನಿರ್ಮಾಣ ಸಾಮಾಗ್ರಿ ಮಾರಾಟ ಮಾಡುವ ಅಂಗಡಿಗೆ ಅವಕಾಶ
ಈ ಮೇಲಿನ ಬಿಟ್ಟು ಉಳಿದ ಎಲ್ಲ ಅಂಗಡಿಗಳು ಮುಚ್ಚುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.