ಬೆಂಗಳೂರು: ಗುರುವಾರ ಒಂದೇ ದಿನ ರಾಜ್ಯದಲ್ಲಿ 783 ಮಂದಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಲೇಟ್ ನೈಟ್ ಪಾರ್ಟಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ನೈಟ್ ಕರ್ಫ್ಯೂ, ನಾಗಪುರದಲ್ಲಿ 1 ವಾರ ಲಾಕ್‌ಡೌನ್ ಘೋಷಣೆಯ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೊರೋನಾ ಸೂಪರ್ ಸ್ಪ್ರೆಡರ್‌ಗಳನ್ನು ತಡೆಯುವ ನಿಟ್ಟಿನಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಮಿಡ್ ನೈಟ್ ಪಾರ್ಟಿಗೆ ನಿಷೇಧ ಹೇರಲಾಗಿದೆ. ಮಧ್ಯರಾತ್ರಿಯಿಂದಲೇ ಆದೇಶ ಜಾರಿಯಾಗಿದ್ದು ಮಾರ್ಚ್ 31ರವರೆಗೂ ಲೇಟ್ ನೈಟ್ ಪಾರ್ಟಿಯನ್ನು ನಿಷೇಧಿಸಲಾಗಿದೆ.
Advertisement
Advertisement
ರಾಜ್ಯದಲ್ಲಿ 2ನೇ ಅಲೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಈಗ ಮತ್ತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜನ ಹೆಚ್ಚಾಗಿ ಸೇರುವ ಕಾರ್ಯಕ್ರಮಗಳ ಮೇಲೆ ಸರ್ಕಾರ ನಿರ್ಬಂಧ ಹೇರುವ ಸಾಧ್ಯತೆಯಿದೆ.
Advertisement
Advertisement
ಮದುವೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಮದುವೆಗಳಲ್ಲಿ ಎಷ್ಟು ಮಂದಿ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.