ಮಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿರಲು ಕಾರಣ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಇದು ಬಿಜೆಪಿಗೆ ಮತ್ತು ಅವರ ಮುಖಂಡರಿಗೆ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗಿನ ಸರ್ಕಾರದ ಬಗ್ಗೆ ಜನರಿಗೆ ಗೊತ್ತಾಗಿದೆ.ಬಿಜೆಪಿ ನಾಯಕರಿಗೆ ಬಿಜೆಪಿ ದುರಾಡಳಿದ ಬಗ್ಗೆ ಅಸಮಾಧಾನವಿದೆ. ಜನ ಸಾಮಾನ್ಯರೂ ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ. ಇದರಿಂದ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಉಕ್ಕಿ ಹರಿಯುತ್ತಿರುವ ಜಲಪಾತ- ಜಾರುವ ಬಂಡೆ ಮೇಲೆ ಪ್ರವಾಸಿಗರ ಹುಚ್ಚಾಟ
ಈ ಸರ್ಕಾರದ ಬಗ್ಗೆ ಜನರ ಭಾವನೆ ಏನು ಎಂಬುದು ಬಿಜೆಪಿ ನಾಯಕರಿಗೂ ಗೊತ್ತಾಗಿದೆ. ಎಲ್ಲಾ ರಂಗದಲ್ಲೂ ಬಿಜೆಪಿ ವೈಫಲ್ಯ ಜನರಿಗೆ ಹಾಗೂ ಮುಖಂಡರಿಗೆ ಗೊತ್ತಾಗಿದೆ. ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಬಿಜೆಪಿ ನಾಯಕರೇ ಹೇಳ್ತಾ ಇದ್ದಾರೆ. ಮುಂದೆ ಕಾಂಗ್ರೆಸ್ ನಾಯಕರೇ ಸಿಎಂ ಆಗಿ ಬರ್ತಾರೆ. ನಾನು ಸಿಎಂ ಆಗುವ ವಿಚಾರ ಸದ್ಯಕಿಲ್ಲ ಎಂದು ಅವರು ಕಿರುನಗೆ ಬೀರಿದರು.