– ಮಳೆ ನಡ್ವೆ ನಂದಿಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ
ಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆ ಆಗಿದೆ. ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆಯಾಗುತ್ತಿದೆ.
ಶಿರಸಿಯ ಮುಂಡಿಗೆ ಹಳ್ಳಿಯಲ್ಲಿ ಗೋಡೆ ಬಿದ್ದು ಯಶೋಧಾ ಎಂಬಾಕೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಹಲವೆಡೆ ಮನೆ ಛಾವಣಿ ಕುಸಿದಿವೆ. ಮರಗಳು ಧರೆಗುರುಳಿವೆ.
Advertisement
Advertisement
ವಿಜಯಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಮಳೆ ವ್ಯಾಪಕವಾಗಿ ಆಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿದೆ. ಪರಿಣಾಮ ನೇತ್ರಾವತಿ, ಫಲ್ಗುಣಿ ನದಿಗಳ ಹರಿವು ಹೆಚ್ಚಿದೆ. ಮಂಗಳೂರಿನ ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ. ಜೆಪ್ಪಿನಮೊಗರು ಬಳಿ ಮನೆಗಳಿಗೆ ನೀರು ನುಗ್ಗಿದೆ.
Advertisement
Advertisement
ಉಡುಪಿಯಲ್ಲಿ ಭಾರೀ ಮಳೆಗೆ 15ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜೋರು ಮಳೆ ಆಗಿದೆ. ಬೆಂಗಳೂರು, ಹಾಸನ, ಮೈಸೂರು, ಚಿತ್ರದುರ್ಗ ಸೇರಿ ಹಲವೆಡೆ ಸೋನೆ ಮಳೆ ಆಗಿದೆ. ಇದನ್ನೂ ಓದಿ: ಗದ್ದೆಗಿಳಿದು ಕೃಷಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಈ ಮಧ್ಯೆ ಸೋನೆ ಮಳೆ ನಡುವೆಯೂ ಪ್ರವಾಸಿಗರ ದಂಡು ನಂದಿಬೆಟ್ಟಕ್ಕೆ ಲಗ್ಗೆ ಇಟ್ಟಿದೆ. ನೂರಾರು ಕಾರು ಬೈಕ್ಗಳಲ್ಲಿ ನಂದಿ ಬೆಟ್ಟಕ್ಕೆ ಜನ ದಾಂಗುಡಿ ಇಟ್ಟಿದ್ದಾರೆ. ಕೊರೋನಾ ಸ್ಫೋಟದ ಭೀತಿ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ವೀಕೆಂಡ್ನಲ್ಲಿ ನಂದಿಬೆಟ್ಟಕ್ಕೆ ಪ್ರವಾಸಿಗರು ಬರೋದನ್ನು ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ರು. ಹೀಗಾಗಿ ವೀಕೆಂಡ್ ಬದಲು ವೀಕ್ ಡೇಸ್ನಲ್ಲೇ ಜನ ನಂದಿಬೆಟ್ಟಕ್ಕೆ ಎಂಟ್ರಿ ಕೊಡಲು ಶುರು ಮಾಡಿದ್ದಾರೆ.