ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಸೂಚನೆಯಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಚಾಮರಾಜಗರದಲ್ಲಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕೇರಳದೊಂದಿಗೆ ಗಡಿ ಹೊಂದಿರುವ ಚಾಮರಾಜನಗರಕ್ಕೆ ಕೊರೊನಾ ಆತಂಕ ಎದುರಾಗಿದೆ. ಒಂದು ವೇಳೆ ಕೊರೊನಾ ಹೆಚ್ಚಾದರೆ ರಾಜ್ಯ ಮತ್ತೆ ಲಾಕ್‍ಡೌನ್ ಆಗುವ ಸೂಚನೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ಗೇಮ್ 40 ಸಾವಿರ ಕಳ್ಕೊಂಡು ಪ್ರಾಣ ಬಿಟ್ಟ ಬಾಲಕ
ಕೇರಳದಲ್ಲಿ ಸೋಂಕು ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಸೋಂಕು ತಡೆಯುವ ನಿಟ್ಟಿನಲ್ಲಿ ಕೇರಳಕ್ಕೂ ನೆರವು ನೀಡಬೇಕಿದೆ. ಚಾಮರಾಜನಗರದ ಚೆಕ್ ಪೋಸ್ಟ್ ನಲ್ಲಿ ಸಮಗ್ರ ಕೋವಿಡ್ ಪರೀಕ್ಷೆ ಮಾಡುವಂತೆ ಎಚ್ಚರಿಸಿದ್ದಾರೆ.
ಸರ್ಕಾರ ಕೊರೊನಾ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಯಿಡಬೇಕು. ರಾಜ್ಯ ಮತ್ತೆ ಲಾಕ್‍ಡೌನ್ ಆಗುವ ಸೂಚನೆಯಿದೆ. ಈಗಾಗ್ಲೇ ಒಂದು ವರ್ಷ ಲಾಕ್‍ಡೌನ್ ಆಗಿದ್ದು, ಜನ ನೆಲಕಚ್ಚಿ ಹೋಗಿದ್ದಾರೆ. ಜನರು ನೋವಿನಲಿದ್ದು, ಕಣ್ಣೀರಿಡುತ್ತಿದ್ದಾರೆ. ಸರ್ಕಾರ ಇತ್ತ ಗಮನಹರಿಸುವಂತೆ ಎಚ್ಚರಿಸಿದ್ದಾರೆ.