ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಆಕ್‍ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಪರಿಸ್ಥಿತಿ ಕರ್ನಾಟಕದಲ್ಲಿ ಸದ್ಯದಲ್ಲಿ ಇಲ್ಲ. ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡೋದು ತುಂಬಾ ಅವರಸರ ಅನಿಸತ್ತೆ. ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ನಿರ್ಧಾರ ಇಲ್ಲ ಎಂದು ಹೇಳಿದರು.
ವಿದೇಶದಿಂದ ಬಂದ ಎಲ್ಲರಿಗೂ ಐಸೋಲೇಶನ್ ಇಲ್ಲ. ಆದರೆ ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ ಲ್ಯಾಂಡ್ಸ್ ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಪತ್ತೆಯಾಗಿದೆ. ಹೊಸ ವಂಶವಾಹಿಯ ವೈರಾಣು ಕಾಣಿಸಿಕೊಂಡಿವೆ. ಈಗ ಇರುವ ವೈರಸ್‍ಗಿಂತಲೂ ಹೊಸ ವೈರಸ್‍ನಿಂದ ಸೋಂಕು ಹರಡುವ ಹರಡುವ ಪ್ರಮಾಣ ಹೆಚ್ಚಿತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ ಎಂದರು.
ಏರ್ ಇಂಡಿಯಾದಿಂದ 246 ಮಂದಿ, ಬ್ರಿಟಿಷ್ ಏರ್ ವೇಸ್ 291 ಬಂದಿದ್ದು, ಏರ್ ಇಂಡಿಯಾದಿಂದ 89 ಜನ ಹಾಗೂ ಬ್ರಿಟಿಷ್ ಏರ್ ವೇಸ್ ನಿಂದ 49 ಜನರು ಟೆಸ್ಟ್ ಮಾಡಿಸದೇ ಬಂದಿದ್ದು, ಒಟ್ಟು 138 ಜನ ಟೆಸ್ಟ್ ಇಲ್ಲದೆ ಬಂದಿದ್ದಾರೆ ಕರ್ನಾಟಕಕ್ಕೆ ಬಂದಿದ್ದಾರೆ. ಈ 138 ಜನರನ್ನ ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ವಿದೇಶದಿಂದ ಬರೋರಿಗೆ 7 ದಿನ ಹೋಮ್ ಐಸೋಲೇಶನ್ ಕಡ್ಡಾಯ ಮಾಡಲಾಗುತ್ತದೆ. ಅಲ್ಲದೆ ಪಾಸಿಟಿವ್ ಬಂದವರಿಗೆ ಸಾಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಇಂಗ್ಲೆಂಡಿನಲ್ಲಿ ಪತ್ತೆಯಾದ ಹೊಸ ವೈರಸ್ ಹಿಂದಿನ ವೈರಸ್ಸಿಗಿಂತ ಶೇ.70ರಷ್ಟು ಪಟ್ಟು ವೇಗವಾಗಿ ಹರಡುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.